ಹಳಿಯಾಳ: ಮಿನಿ ವಿಧಾನಸೌಧದಲ್ಲಿ ನಡೆದ ಸಭೆಗೆ ಆಗಮಿಸದ ಅಧಿಕಾರಿಗಳಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಶಾಸಕ ಆರ್.ವಿ. ದೇಶಪಾಂಡೆ ಮೂರು ತಾಲೂಕಗಳ ತಹಶೀಲ್ದಾರ್‌ಗೆ ಆದೇಶಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಇಂದು ನಡೆದ ಸಭೆಗೆ ಕೆಲವು ಅಧಿ ಕಾರಿಗಳು ಆಗಮಿಸಿಲ್ಲ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆಗಾಗಿ ನಡೆಸಿದ ಸಭೆಗೆ ಆಗಮಿಸದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಶಾಸಕರು ಅಧಿ ಕಾರಿಗಳಿಗೆ ಶಾಸಕರ, ಸಚಿವರ ಬಗ್ಗೆಯೂ ಭಯವಿಲ್ಲ. ಮಾತ್ರವಲ್ಲದೇ ಆಡಳಿತಾಧಿಕಾರಿಗಳ ಭಯವು ಇಲ್ಲದಂತೆ ಕಾಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಿಆರ್‌ಡಿ, ವಾಟರ್ ಸಪ್ಲಾಯ್, ಪಶು ವೈದ್ಯ ಸೇರಿದಂತೆ ಇತರ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಅಧಿಕಾರಿಗಳು ಸರ್ಕಾರದಿಂದ ಸಂಬಳ ಪಡೆಯುತ್ತೀರಿ ಕಾರಣ ಸಂಬಳ ಪಡೆದ ಹಾಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದರು. ಹಳಿಯಾಳ-ದಾಂಡೇಲಿ ಮತ್ತು ಜೋಯಿಡಾ ಮೂರು ತಾಲೂಕುಗಳಿಗೆ ತಲಾ ಒಂದು ಕೋಟಿಯಂತೆ 3 ಕೋಟಿ ರೂ. ಎನ್ ಡಿಆರ್‌ಎಫ್ ಮಂಜೂರಾಗಿದೆ. ಅಲ್ಲದೇ ಹಳಿಯಾಳ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 68 ಲಕ್ಷ ರೂ. ಅನುದಾನ ಮಂಜೂರಾಗಿದ್ದು ಈ ಅನುದಾನದ ಕಾಮಗಾರಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಕ್ಷೇತ್ರದಲ್ಲಿ ಈ ಅನುದಾನದಲ್ಲಿ ನಡೆಯುವ ಕಾಮಗಾರಿಗಳು ಗುಣಮಟ್ಟದ್ದಾಗಿರಬೇಕು. ಅಧಿಕಾರಿಗಳು ಮೇಲಿಂದ ಮೇಲೆ ಕಾಮಗಾರಿಗಳ ಪರಿಶೀಲನೆ ನಡೆಸಬೇಕು. ಒಂದಾನುವೇಳೆ ಕಳಪೆ ಅಥವಾ ಗುಣಮಟ್ಟವಲ್ಲದ ಕಾಮಗಾರಿ ನಡೆದಿದ್ದು ಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ :ಅರ್ಹ ಕೃಷಿಕರಿಗೆ ಪಟ್ಟಾ ನೀಡಿ: ಕುಮಾರ ಬಂಗಾರಪ್ಪ
ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಪುರಸಭೆ ಅಧ್ಯಕ್ಷ ಅಜರ ಬಸರಿಕಟ್ಟಿ, ತಾಪಂ ಅಧ್ಯಕ್ಷೆ ರಿಟಾ ಸಿದ್ದಿ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್, ಮಹೇಶ್ರಿ ಮಿಶ್ಯಾಳೆ, ಲಕ್ಷ್ಮೀ ಕೊರ್ವೆಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ sಸುಭಾಷ ಕೊರ್ವೆಕರ, ತಾಪಂ ಸದಸ್ಯರು, ತಹಶೀಲ್ದಾರ್ ಪ್ರವೀಣ ಹುಚ್ಚನ್ನವರ ಸೇರಿದಂತೆ ಅಧಿಕಾರಿಗಳು ಇದ್ದರು.