Advertisement

T20 Rankings: 143 ಸ್ಥಾನಗಳ ಏರಿಕೆ ಕಂಡ ರುತುರಾಜ್ ಗಾಯಕ್ವಾಡ್

05:30 PM Aug 23, 2023 | Team Udayavani |

ಮುಂಬೈ: ಐರ್ಲೆಂಡ್ ಸರಣಿಯಲ್ಲಿ ಭಾರತದ ಆರಂಭಿಕ ಆಟಗಾರ ಮತ್ತು ಏಷ್ಯನ್ ಗೇಮ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರು ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅರ್ಧಶತಕದ ನಂತರ ಟಿ20 ಶ್ರೇಯಾಂಕದಲ್ಲಿ 143 ಸ್ಥಾನಗಳನ್ನು ಏರಿದ್ದಾರೆ.

Advertisement

ಐರ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ವೃತ್ತಿಜೀವನದ ಅತ್ಯುತ್ತಮ 58 ರನ್ ಬಾರಿಸಿದ ಗಾಯಕ್ವಾಡ್ ಭರ್ಜರಿ ಜಂಪ್ ಪಡೆದಿದ್ದಾರೆ.

ಗಾಯಕ್ವಾಡ್ ಅವರು 143 ಸ್ಥಾನಗಳನ್ನು ಸುಧಾರಿಸಿ 87 ನೇ ಶ್ರೇಯಾಂಕಕ್ಕೆ ಬಂದಿದ್ದಾರೆ. ಮೂರನೇ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದರೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ.

ಇದನ್ನೂ ಓದಿ:New Education Policy: ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ

ಗಾಯಕ್ವಾಡ್ ಅವರೊಂದಿಗೆ ರವಿ ಬಿಷ್ಣೋಯ್ ಅವರು 17 ಸ್ಥಾನ ಏರಿಕೆ ಕಂಡು 65ನೇ ರ್ಯಾಂಕ್ ನಲ್ಲಿದ್ದಾರೆ. ಅಲ್ಲದೆ ವರ್ಷದ ಬಳಿಕ ಕಮ್ ಬ್ಯಾಕ್ ಮಾಡಿದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಏಳು ಸ್ಥಾನ ಜಂಪ್ ಮಾಡಿ 84ನೇ ಸ್ಥಾನದಲ್ಲಿದ್ದಾರೆ.

Advertisement

ಏಕದಿನ ಕ್ರಿಕೆಟ್‌ ನಲ್ಲಿ ಬ್ಯಾಟರ್ ಶುಭ್ಮನ್ ಗಿಲ್ ಅವರು ಐಸಿಸಿ ರ್ಯಾಂಕಿಂಗ್‌ ನಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯದ ನಂತರ ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ, ಗಿಲ್ ಈಗ 743 ರೇಟಿಂಗ್ ಅಂಕಗಳನ್ನು ಪಡೆದು ಭಾರತದ ಅಗ್ರ ಶ್ರೇಯಾಂಕದ ಬ್ಯಾಟರ್ ಆಗಿ ಸ್ಥಾನ ಪಡೆದಿದ್ದಾರೆ. ಬಾಬರ್ ಅಜಂ, ರಸ್ಸಿ ವ್ಯಾನ್ ಡೆರ್ ಡ್ಯುಸನ್ ಮತ್ತು ಇಮಾಮ್ ಉಲ್ ಹಕ್ ಅವರು ಏಕದಿನದಲ್ಲಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next