ಹೊಸದಿಲ್ಲಿ: ಯೂಟ್ಯೂಬ್ ನಲ್ಲಿ ‘ಕೊಕೊ ಇನ್ ಇಂಡಿಯಾ’ ಎಂಬ ಹೆಸರಿನಲ್ಲಿ ಪ್ರಸಿದ್ದರಾಗಿರುವ ರಷ್ಯಾದ ಯೂಟ್ಯೂಬರ್ ಗೆ ದೆಹಲಿಯ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ವ್ಲಾಗ್ ಮಾಡುವಾಗ ಕಿರುಕುಳ ನೀಡಿದ ಪ್ರಸಂಗ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ, ವ್ಯಕ್ತಿಯೋರ್ವ ರಷ್ಯಾದ ಮಹಿಳೆಯ ಜತೆ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆಕೆಯನ್ನು ತನ್ನ ಸ್ನೇಹಿತೆಯಾಗಲು ಬಯಸುತ್ತೀರಾ ಎಂದು ಅವನು ಕೇಳುವುದನ್ನು ಕಾಣಬಹುದು. ಆತನಿಂದ ಕಿರಿಕಿರಿ ಅನುಭವಿಸಿದ ಮಹಿಳೆ ಆತನ ಸ್ನೇಹವನ್ನು ತಿರಸ್ಕರಿಸಿ ದೂರ ಹೋಗುತ್ತಾಳೆ, ಆದರೆ ಅವನು ಅವಳನ್ನು ಹಿಂಬಾಲಿಸುತ್ತಲೇ ಇರುವುದು ವಿಡಿಯೋದಲ್ಲಿ ದಾಖಲಾಗಿದೆ.
“ಮೇರೆ ದೋಸ್ತ್ ಮೈ ಸರೋಜಿನಿ ನಗರ್ ಮೇ ಹೂ (ನನ್ನ ಸ್ನೇಹಿತರೆ, ನಾನು ಸರೋಜಿನಿ ನಗರದಲ್ಲಿ ಇದ್ದೇನೆ)” ಎಂದು ರಷ್ಯಾದ ವ್ಲಾಗರ್ ಹೇಳುವ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ. ಆಕೆಯನ್ನು ಹಿಂಬಾಲಿಸಿದ ವ್ಯಕ್ತಿ, “ನೀವು ನನ್ನ ಸ್ನೇಹಿತರಾಗಬಹುದೇ” ಎಂದು ಆ ವ್ಯಕ್ತಿ ಕೇಳಿದರು. ಮಹಿಳೆ ಹಿಂದಿಯಲ್ಲಿ, “ಲೇಕಿನ್ ಮೈ ಆಪ್ಕೋ ನ್ಹಿ ಜಾನ್’ತಿ ಹೂ” (ಆದರೆ ನನಗೆ ನೀನು ಗೊತ್ತಿಲ್ಲ) ಎಂದು ಉತ್ತರಿಸಿದಳು. ಅದಕ್ಕೆ ಆತ, “ಜಾನ್-ಪೆಹಚಾನ್ ದೋಸ್ತಿ ಸೆ ಹೋ ಜಾಯೇಗಿ” (ನಾವು ಸ್ನೇಹಿತರಾದ ನಂತರ ಒಬ್ಬರನ್ನೊಬ್ಬರು ತಿಳಿದುಕೊಳ್ಳಬಹುದು) ಎನ್ನುತ್ತಾರೆ.
ಆದಾಗ್ಯೂ, ರಷ್ಯಾದ ಮಹಿಳೆ ಅವನ ವಿಧಾನವನ್ನು ನಿರಾಕರಿಸಿದಳು ಮತ್ತು ತನಗೆ ಯಾವುದೇ ಹೊಸ ಸ್ನೇಹಿತರನ್ನು ಬಯಸುವುದಿಲ್ಲ ಎಂದು ಹೇಳಿದರು. ಅದಕ್ಕೆ ಆತ ನನಗೆ ರಷ್ಯನ್ ಸ್ನೇಹಿತೆ ಬೇಕು ಎನ್ನುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ