Advertisement

ನಡುಕದ ನಡುವೆ ಭಾವ ಬಂಧ: ಟ್ಯಾಂಕರ್‌ ಹಾದು ಹೋದರೂ ಬದುಕುಳಿದ ಅಜ್ಜ!

11:45 PM Feb 26, 2022 | Team Udayavani |

ಉಕ್ರೇನ್‌ ರಾಜಧಾನಿ ಕೀವ್‌ ನಗರದಲ್ಲಿ ತನ್ನ ಪಾಡಿಗೆ ತಾನು ಬರುತ್ತಿದ್ದ ಉಕ್ರೇನ್‌ನ ಪ್ರಜೆಯೊಬ್ಬರ ಕಾರಿನ ಮೇಲೆ, ಅದೇ ರಸ್ತೆಯಲ್ಲಿ ಎದುರು ಬದಿಯಿಂದ ಬರುತ್ತಿದ್ದ ರಷ್ಯಾದ ಯುದ್ಧ ಟ್ಯಾಂಕರ್‌ ಹರಿದಿತ್ತು.

Advertisement

ಟ್ಯಾಂಕರ್‌ನ ಚಾಲಕ ಉದ್ದೇಶ ಪೂರ್ವಕವಾಗಿಯೇ ಕಾರಿನ ಮೇಲೆ ಟ್ಯಾಂಕರ್‌ ಚಲಾಯಿಸಿದ್ದರ ವಿಡಿಯೋ ವೈರಲ್‌ ಆಗಿತ್ತು. ಆದರೆ, ವಿಡಿಯೋದಲ್ಲಿ ಕಾರಿನಲ್ಲಿದ್ದವರ ಗತಿ ಏನಾಯಿತು ಎಂಬುದು ತಿಳಿದಿರಲಿಲ್ಲ. ಈಗ ಆ ಬಗ್ಗೆ ವರದಿಗಳು ಮೂಡಿಬಂದಿವೆ.

ಕಾರಿನಲ್ಲಿ ಒಬ್ಬ ವೃದ್ಧನಿದ್ದ. ಸುದೈವಶಾತ್‌ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಕಾರು ನಜ್ಜುಗುಜ್ಜಾಗಿದ್ದು, ಅದರ ಅವಶೇಷಗಳಡಿಯಿಂದ ಆತನನ್ನು ಹೊರಗೆಳೆಯಲಾಗಿದೆ. ಸ್ಥಳೀಯರು ತಮ್ಮ ಮನೆಗಳಿಂದ ಕಟಿಂಗ್‌ ಪ್ಲೇಯರ್‌ ಹಾಗೂ ಇನ್ನಿತರ ಟೂಲ್‌ಗ‌ಳನ್ನು ತಂದು ಕಾರಿನ ಡೋರ್‌ ಹಾಗೂ ಇನ್ನಿತರ ಭಾಗಗಳನ್ನು ಕತ್ತರಿಸಿ ತೆಗೆದುಹಾಕಿ, ಹಿರಿಯ ನಾಗರಿಕರನ್ನು ಹೊರಗೆಳೆದಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next