Advertisement
ದಂಗೆಯ ಬಳಿಕ ನಡೆದಿದ್ದ ಮೊದಲ ಸಂಪುಟ ಸಭೆಯಲ್ಲಿ ಅಂಶವನ್ನು ಮೊದಲ ಬಾರಿಗೆ ಒಪ್ಪಿಕೊಳ್ಳಲಾಗಿದೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖೀಸಲಾಗಿದೆ. ಸರ್ಕಾರದ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದೇ ವೇಳೆ, ರಷ್ಯಾ ರಕ್ಷಣಾ ಸಚಿವ ಸರ್ಗೆ ಶಿಗೋ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಂಡು ಪರಿಸ್ಥಿತಿ ನಿಯಂತ್ರಣದಲ್ಲಿ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.
ಈ ನಡುವೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕತಾರ್ ದೊರೆ ಶೇಕ್ ತಮೀಮ್ ಬಿನ್ ಹಮ್ಮದ್ ಅಲ್ ತಹಾನಿ ಜತೆಗೆ ಫೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದಂಗೆಯನ್ನು ಹತ್ತಿಕ್ಕುವಲ್ಲಿ ಕೈಗೊಂಡ ಕ್ರಮಗಳನ್ನು ಪುಟಿನ್ ವಿವರಿಸಿದಾಗ ಅದಕ್ಕೆ ದೊರೆ ಸಮರ್ಥನೆ ನೀಡಿದರು ಎಂದು ರಷ್ಯಾ ಸರ್ಕಾರ ಪ್ರಕಟಿಸಿದೆ.