Advertisement

Russia: ಕೈದಿಗಳ ಸಾಗಿಸುತ್ತಿದ್ದ ರಷ್ಯಾ ವಿಮಾನ ಪತನ: 65 ಮಂದಿ ಸಾವು

09:31 PM Jan 24, 2024 | Team Udayavani |

ಮಾಸ್ಕೋ: ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಕರೆದೊಯ್ಯುತ್ತಿದ್ದ ರಷ್ಯಾದ ವಿಮಾನ ಪತನಗೊಂಡು, ಅದರಲ್ಲಿ ಇದ್ದವರೆಲ್ಲರೂ ಅಸುನೀಗಿದ್ದಾರೆ. ಉಕ್ರೇನ್‌ ಮತ್ತು ರಷ್ಯಾ ಗಡಿಗೆ ಹೊಂದಿಕೊಂಡು ಇರುವ ಬಿಲ್‌ಗ‌ರ್ದ್‌ ಪ್ರಾಂತ್ಯದ ವ್ಯಾಪ್ತಿಯಲ್ಲಿ ವಿಮಾನ ಪತನಗೊಂಡಿದೆ. ಯಾವ ಕಾರಣದಿಂದಾಗಿ ವಿಮಾನ ಪತನಗೊಂಡಿದೆ ಎಂಬ ಬಗ್ಗೆ ಕಾರಣಗಳು ಗೊತ್ತಾಗಿಲ್ಲ.

Advertisement

ವಿಮಾನ ಪತನಗೊಳ್ಳುವ ವಿಡಿಯೋ ಈಗ ಜಗತ್ತಿನಾದ್ಯಂತ ವೈರಲ್‌ ಆಗಿದೆ. ಕೈದಿಗಳ ವಿನಿಮಯ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ರಷ್ಯಾದ ಸೇನೆಗೆ ಸೇರಿದ ಇಲ್ಯುಷಿನ್‌-76 ಸರಕು ಸಾಗಣೆ ವಿಮಾನದಲ್ಲಿ ಅವರನ್ನು ಕರೆದೊಯ್ಯಲಾಗುತ್ತಿತ್ತು. ಬಿಲ್‌ಗ‌ರ್ದ್‌ ಪ್ರಾಂತ್ಯದ ಗವರ್ನರ್‌ ಘಟನೆಯನ್ನು ಖಚಿತಪಡಿಸಿದ್ದು, ಎಷ್ಟು ಮಂದಿ ಅಸುನೀಗಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಲಿಲ್ಲ.

ರಷ್ಯಾ ಸರ್ಕಾರದ ಸುದ್ದಿ ಸಂಸ್ಥೆ ಕೂಡ ಘಟನೆಯನ್ನುಖಚಿತಪಡಿಸಿದೆ. ಹೆಸರು ಬಹಿರಂಗಪಡಿಸಲಿಚ್ಛಿಸದ ರಷ್ಯಾದ ಇಬ್ಬರು ಸಂಸದರು ನೀಡಿದ ಮಾಹಿತಿಯಂತೆ ಸೇನಾ ವಿಮಾನವನ್ನು ಉಕ್ರೇನ್‌ ಸೇನೆಯೇ ಹೊಡೆದು ಉರುಳಿಸಿದೆ ಎಂದು ಪ್ರತಿಪಾದಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ರಷ್ಯಾ ನಿಯಂತ್ರಿತ ನಿಡಾನೆಸ್ಕ್ ಪ್ರದೇಶದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ 2 ಮಕ್ಕಳೂ ಸೇರಿದಂತೆ 23 ಮಂದಿ ಸಾವಿಗೀಡಾಗಿದ್ದರು.

ರಷ್ಯಾ ಮತ್ತು ಉಕ್ರೇನ್‌ ನಡುವೆ ಎರಡು ವರ್ಷಗಳಿಂದ ಕಾಳಗ ನಡೆಯುತ್ತಿದ್ದು, ವಿಶ್ವಸಂಸ್ಥೆಯ ಮಾಹಿತಿ ಪ್ರಕಾರ 10000ಕ್ಕೂ ಅಧಿಕ ಮಂದಿ ಜೀವಕಳೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next