ಕೀವ್: ಉಕ್ರೇನ್‌ನ ದಕ್ಷಿಣ ಭಾಗಕ್ಕಿರುವ ಕಪ್ಪು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ರಷ್ಯಾ ಕೆಲವು ಯುದ್ಧ ನೌಕೆಗಳ ಮೇಲೆ ದಾಳಿ ನಡೆಸಿರುವುದಾಗಿ ಉಕ್ರೇನ್ ಹೇಳಿದೆ. ಅದರಲ್ಲಿ ಪ್ರಮುಖವಾಗಿ, ಮೊಸ್ಕಾವಾ ಎಂಬ ಯುದ್ಧ ನೌಕೆಯನ್ನು ತನ್ನಲ್ಲಿನ ” ನೆಪ್ಚ್ಯೂನ್’ ಕ್ಷಿಪಣಿಯ ಮೂಲಕ ಧ್ವಂಸಗೊಳಿಸಿ ರುವುದಾಗಿ ಅದು ತಿಳಿಸಿದೆ.
ಮತ್ತೂಂದೆಡೆ, ರಷ್ಯಾದ ರಕ್ಷಣ ಇಲಾಖೆ ಕೂಡ ಮೊಸ್ಕಾವಾ ಹಡಗಿನ ಮೇಲೆ ಉಕ್ರೇನ್ ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿದೆ. ಹಡಗಿಗೆ ಬೆಂಕಿ ಹೊತ್ತಿದ್ದು ಅದನ್ನು ನಂದಿ ಸುವ ಕೆಲಸ ಮಾಡಲಾ ಗುತ್ತಿದೆ. ಹಡಗಿನಲ್ಲಿದ್ದ ಶಸ್ತ್ರಾಸ್ತ್ರ ಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದೆ. ಯುದ್ಧ ನೌಕೆಗೆ ಏನೂ ಆಗಿಲ್ಲ ಎಂದು ರಷ್ಯಾ ತಿಳಿಸಿದೆಯಾದರೂ, ಕೆಲವು ಮೂಲಗಳು ಆ ನೌಕೆಯು ಈಗಾಗಲೇ ಸಮುದ್ರದಲ್ಲಿ ಮುಳುಗಲಾರಂಭಿಸಿದೆ ಎಂದು ಹೇಳಲಾಗಿದೆ.
ಸಾವಿರ ಯೋಧರ ಶರಣಾಗತಿ: ಉಕ್ರೇನ್‌ನ 36ನೇ ಇನ್‌ಫ್ಯಾಂಟ್ರಿ ಬ್ರಿಗೇಡ್‌ನ 1026 ಯೋಧರು ತನಗೆ ಶರಣಾಗಿದ್ದಾರೆ ಎಂದು ರಷ್ಯಾ ಹೇಳಿದೆ. ಉಕ್ರೇನ್‌ನ ಮರಿಯು ಪೋಲ್‌ನಲ್ಲಿ ರಷ್ಯಾದ ಸೇನೆಗೆ ಪ್ರತಿರೋಧ ತೋರುವಲ್ಲಿ ನಿರತರಾಗಿದ್ದ ಈ ತುಕಡಿಯು, ಶಸ್ತ್ರತ್ಯಾಗ ಮಾಡಿ, ನಮ್ಮ ಸೈನಿಕರೆದುರು ಮಂಡಿಯೂರಿ ಶರಣಾಗತಿ ಹೊಂದಿದೆ ಎಂದು ರಷ್ಯಾ ಹೇಳಿದೆ. ಶರಣಾಗತಿ ಹೊಂದಿರುವ ಸೈನಿಕರಲ್ಲಿ 162 ಮಂದಿ ಅಧಿಕಾರಿ ಮಟ್ಟದಲ್ಲಿರುವಂಥವಾಗಿದ್ದು, 47 ಮಂದಿ ಮಹಿಳಾ ಯೋಧರಾಗಿ ದ್ದಾರೆ ಎಂದು ರಷ್ಯಾದ ರಕ್ಷಣ ಇಲಾ ಖೆಯ ವಕ್ತಾರರಾದ ಮೇಜರ್ ಜನರಲ್ ಐಗರ್ ಕೊನೆಶೆಂಕೋವ್ ಹೇಳಿದ್ದಾರೆ.
6 ಸಾವಿರ ಕೋಟಿ ರೂ. ಪ್ಯಾಕೇಜ್ :
ಉಕ್ರೇನ್‌ಗೆ 6 ಸಾವಿರ ಕೋಟಿ ರೂ. ಮೌಲ್ಯದ ಸೇನಾ ಪ್ಯಾಕೇಜ್ ನೀಡಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ. ಆಧು ನಿಕ ಶಸ್ತ್ರಾಸ್ತ್ರ, ಶಸ್ತ್ರಾಸ್ತ್ರ ಸಾಗಣೆ ವಾಹನ ಗಳು, ಹೆಲಿಕಾಪ್ಟರ್‌ಗಳು ಈ ಪ್ಯಾಕೇಜ್‌ನಲ್ಲಿ ಉಕ್ರೇನ್‌ಗೆ ಲಭ್ಯವಾಗಲಿವೆ ಎಂದು ಬೈಡನ್ ಹೇಳಿದ್ದಾರೆ.