Advertisement

Ukraine​ ಮೇಲೆ ರಷ್ಯಾದ ಕ್ಷಿಪಣಿ ದಾಳಿ: ಮಗು ಸೇರಿ ನಾಲ್ವರ ಸಾವು; 42 ಮಂದಿಗೆ ಗಾಯ

08:41 AM Jun 28, 2023 | Team Udayavani |

ಕೀವ್​( ಉಕ್ರೇನ್​): ಉಕ್ರೇನ್​ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮುಂದುವರೆಸಿದೆ. ರಷ್ಯಾದ ಎರಡು ಕ್ಷಿಪಣಿಗಳು ಉಕ್ರೇನ್​​ನ ಕ್ರಾಮಾಟೋರ್ಸ್ಕ್‌ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಗು ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 42 ಜನರು ಗಾಯಗೊಂಡಿದ್ದಾರೆ.

Advertisement

ಜನ ಸಂದಣಿ ಇರುವ ಸ್ಥಳಗಳನ್ನು ಗುರುತಿಸಿ ರಷ್ಯಾ ದಾಳಿ ಮುಂದುವರೆಸಿದೆ. ಮೊದಲ ಕ್ಷಿಪಣಿಯು ರೆಸ್ಟೋರೆಂಟ್‌ಗೆ ಅಪ್ಪಳಿಸಿತು.ಇದಾದ ಕೆಲ ಹೊತ್ತಿನಲ್ಲಿಯೇ ಎರಡನೇ ಕ್ಷಿಪಣಿ ಕ್ರಾಮಾಟೋರ್ಸ್ಕ್‌ನ ಹೊರವಲಯದಲ್ಲಿರುವ ಹಳ್ಳಿಯೊಂದರ ಮೇಲೆ ನಡೆದಿದೆ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗಾಯಗೊಂಡವರವನ್ನು ಕೂಡಲೇ ರಕ್ಷಣಾ ಪಡೆಗಳು ಕರೆದೊಯ್ದು ಚಿಕಿತ್ಸೆ ನೀಡಲು ನೆರವಾದರು.

ರಷ್ಯಾ- ಉಕ್ರೇನ್‌ ನಡುವೆ ಯುದ್ದ ಆರಂಭವಾಗಿ ಒಂದೂವರೆ ವರ್ಷವೇ ಆಗುತ್ತಿದೆ. ಕಳೆದ ವರ್ಷದ ಫೆ. 24 ರಂದು ಯುದ್ದ ಆರಂಭವಾಗಿ ಎರಡೂ ದೇಶಗಳು ಪರಸ್ಪರ ದಾಳಿಯಲ್ಲಿ ನಿರತವಾಗಿದೆ. ಇದುವರೆಗೂ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಅಪಾರ ಆಸ್ತಿ, ಪಾಸ್ತಿ ಹಾನಿಯಾಗಿದೆ ಮತ್ತು ಈಗಲೂ ಎರಡು ರಾಷ್ಟ್ರಗಳ ನಡುವೆ ಯುದ್ಧವು ನಡೆಯುತ್ತಲೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next