ಕೀವ್/ಇಸ್ತಾಂಬುಲ್: ಉಕ್ರೇನ್ ವಿರುದ್ಧದ ಸಮರದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೋಲೊಪ್ಪಿಕೊಂಡರೇ?
ಇಂಥ ಅನುಮಾನ ಆರಂಭವಾಗಿದೆ. ಉಕ್ರೇನ್ ರಾಜಧಾನಿ ಕೀವ್ ಹೊರವಲಯ ಮತ್ತು ಚರ್ನೋಹಿವ್‌ನಿಂದ ಸೇನೆಯನ್ನು ನಿಧಾನವಾಗಿ ತೆರವುಗೊಳಿಸಲು ರಷ್ಯಾ ಒಪ್ಪಿಕೊಂಡಿದೆ. ಆದರೆ ಇದು ಕದನ ವಿರಾಮ ಅಲ್ಲ ಎಂದು ಎಚ್ಚರಿಕೆಯನ್ನೂ ನೀಡಿದೆ.
ಈ ಬಗ್ಗೆ ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳ ಜತೆಗೆ ಮಂಗಳವಾರ ನಡೆದ ಮಾತು ಕತೆಯಲ್ಲಿ ಒಪ್ಪಂದಕ್ಕೆ ಬರಲಾಗಿದೆ.
ಇದನ್ನೂ ಓದಿ:ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆ ಗೆಲುವು
ಇದರಿಂದ ಸಮರದ ಬಿರುಸು ಸ್ವಲ್ಪ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರ ಜತೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನಡುವೆ ನೇರ ಭೇಟಿ-ಮಾತುಕತೆಯೂ ನಡೆಯುವ ಸಾಧ್ಯತೆಗಳೂ ಇವೆ. ಈ ಹಿಂದೆ ನಡೆದಿದ್ದ ಶಾಂತಿ ಮಾತುಕತೆಗಳಲ್ಲಿ ಎರಡೂ ರಾಷ್ಟ್ರಗಳ ನಿಯೋಗಗಳ ನಡುವೆ ಸಹಮತ ಮೂಡಿರಲಿಲ್ಲ.