Advertisement
ಭಾರತದಲ್ಲಿ ಮಾಸ್ಟರ್‌ಸ್ಟ್ರೋಕ್ ಎಂದು ಕರೆಸಿಕೊಂಡ ಲಾಕ್‌ಡೌನ್‌ನಿಂದಾಗಿ ಆರಂಭದಲ್ಲಿ ಎದುರಾಗಬಹುದಾಗಿದ್ದ ಅನಾಹುತ ತಪ್ಪಿದಂತಾಗಿದೆ. ಆದರೆ ಮೇ 18ರಿಂದ ದೇಶದಲ್ಲಿ ನಿತ್ಯ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಲೇ ಇದೆ. ಆದಾಗ್ಯೂ, ಸ್ಥಿತಿಯನ್ನು ತುಲನಾತ್ಮಕವಾಗಿ ಅರ್ಥಮಾಡಿಕೊಳ್ಳಬೇಕು ಎಂದರೆ, ನಾವು ಬ್ರಿಟನ್ ಅಥವಾ ಇಟಲಿಯತ್ತ ನೋಡದೆ, ಅಧಿಕ ಉಪಯುಕ್ತವಾಗುವಂಥ ಉದಾಹರಣೆಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ರಷ್ಯಾ. ಗಮನಾರ್ಹ ಸಂಗತಿಯೆಂದರೆ ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಮೂರನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಸೋಂಕಿತರ ಸಂಖ್ಯೆ ಶುಕ್ರವಾರದ ವೇಳೆಗೆ 4 ಲಕ್ಷ 49 ಸಾವಿರಕ್ಕೇರಿದರೂ, ಆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ಭಾರತಕ್ಕಿಂತಲೂ ಕಡಿಮೆಯಿದೆ. ಅಲ್ಲಿ 5 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದರೆ, ಏಳನೇ ಸ್ಥಾನದಲ್ಲಿರುವ ಭಾರತದಲ್ಲಿ ಮೃತಪಟ್ಟವರ ಸಂಖ್ಯೆ 6 ಸಾವಿರದ ಗಡಿ ದಾಟಿದೆ. ರಷ್ಯಾ ವ್ಯಾಪಕ ಟೆಸ್ಟಿಂಗ್‌ಗಳ ಮೂಲಕ ಆರಂಭದ ದಿನಗಳಲ್ಲೇ ರೋಗಿಗಳನ್ನು ಪತ್ತೆಹಚ್ಚಲಾರಂಭಿಸಿತು.
Advertisement
ರಷ್ಯಾದ ಕೋವಿಡ್ ಕಥನ ; ಮಾದರಿಯಾಗಲಿ ಪ್ರಯತ್ನ
10:00 AM Jun 06, 2020 | mahesh |
Advertisement
Udayavani is now on Telegram. Click here to join our channel and stay updated with the latest news.