ಉಕ್ರೇನ್ ವಿರುದ್ಧ ಫೆ.24ರಿಂದ ದಾಳಿ ನಡೆಸುತ್ತಿರುವ ರಷ್ಯಾ ಪಡೆದುಕೊಂಡಿದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಅಧಿಕೃತ ಮಾಹಿತಿ ಪ್ರಕಾರ, ಯುದ್ಧದಲ್ಲಿ ಇದುವರೆಗೂ ರಷ್ಯಾದ 97,960 ಸೈನಿಕರು ಮಡಿದಿದ್ದಾರೆ.
ಅಲ್ಲದೇ ಅನೇಕ ಯುದ್ಧ ವಿಮಾನಗಳು, ಯುದ್ಧ ಸಾಮಗ್ರಿಗಳು ಧ್ವಂಸವಾಗಿವೆ. ಈ ಬಗ್ಗೆ ಉಕ್ರೇನ್ ರಕ್ಷಣಾ ಸಚಿವಾಲಯ ಮಾಹಿತಿ ಬಹಿರಂಗಪಡಿಸಿದೆ.
ಇನ್ನೊಂದೆಡೆ, ಪೊಲೆಂಡ್‌ನ ಪೊಲೀಸ್ ಕಮಾಂಡರ್ ಕಚೇರಿ ಮೇಲೆ ಶನಿವಾರ ರಷ್ಯಾ ಗ್ರೆನೆಡ್ ದಾಳಿ ನಡೆಸಿದೆ. ದಾಳಿಯಲ್ಲಿ ಪೊಲೆಂಡ್ ಪೊಲೀಸ್ ಕಮಾಂಡರ್ ಇನ್ ಚೀಫ್ ಜರೋಸ್ಲಾವ್ ಸಿಮಿಕ್ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಯುದ್ಧದಲ್ಲಿ ಉಕ್ರೇನ್‌ಗೆ ಪೊಲೆಂಡ್ ಸಹಾಯ ಮಾಡುತ್ತಿರುವುದರಿಂದ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ರಷ್ಯಾ ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ 2022ರ ಫೆ.24ರಿಂದ ಡಿ.17ರವರೆಗೆ ಯುದ್ಧದಲ್ಲಿ ಆಹುತಿಯಾದ ರಷ್ಯಾ ಸೈನಿಕರು ಮತ್ತು ಯುದ್ಧ ಸಾಮಗ್ರಿಗಳ ಅಂಕಿ-ಅಂಶ.
97,690 ಮಡಿದ ರಷ್ಯಾ ಯೋಧರು
2985 ಟ್ಯಾಂಕರ್‌ಗಳು
5958 ಶಸ್ತ್ರಸಜ್ಜಿತ ಯುದ್ಧ ವಾಹನ
1947 ಫಿರಂಗಿಗಳು
410 ಬಹು ಉಡಾವಣಾ ರಾಕೆಟ್ ವ್ಯವಸ್ಥೆ
211 ವಾಯು ರಕ್ಷಣಾ ವ್ಯವಸ್ಥೆ
281 ಯುದ್ಧ ವಿಮಾನಗಳು
264 ಹೆಲಿಕಾಪ್ಟರ್‌ಗಳು
1648 ಡ್ರೋನ್‌ಗಳು
16 ಯುದ್ಧ ಹಡಗುಗಳು
4577 ವಾಹನಗಳು, ಇಂಧನ ಟ್ಯಾಂಕ್‌ಗಳು