Advertisement
ಇಂಥ ಹೊತ್ತಿನಲ್ಲೇ ರಷ್ಯಾ ಉಕ್ರೇನ್ ವಿರುದ್ಧ ಸಮರಕ್ಕೆ ಮುಂದಾಗಿದೆ. ಈಗಾಗಲೇ ಉಕ್ರೇನ್ ಗಡಿಯಲ್ಲಿ ಲಕ್ಷಾಂತರ ಸೈನಿಕರನ್ನು ರಷ್ಯಾ ನಿಯೋಜಿಸಿದೆ. ಅಷ್ಟೇ ಅಲ್ಲ, ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಇಲ್ಲಿಗೆ ಸಾಗಿಸಲಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
Related Articles
Advertisement
ಅಂದರೆ ಸದ್ಯ ರಷ್ಯಾ ಬದಿಯಲ್ಲೇ ಬಂದು ಕುಳಿತುಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗುವುದಿಲ್ಲ. ಉಕ್ರೇನ್ ನ್ಯಾಟೋದ ಸದಸ್ಯ ರಾಷ್ಟ್ರವಾದರೆ ಗಡಿಯಲ್ಲೇ ಬಂದು ಕುಳಿತುಕೊಳ್ಳಬಹುದು ಇದರಿಂದ ರಷ್ಯಾದ ಭದ್ರತೆಗೆ ಧಕ್ಕೆ ಬರುತ್ತದೆ ಎಂಬ ಆಲೋಚನೆಯಲ್ಲೂ ರಷ್ಯಾವಿದೆ.
ಅತ್ತ ಅಮೆರಿಕ ಕೂಡ ತನ್ನ ಪಟ್ಟು ಸಡಿಲಿಸದೇ ಉಕ್ರೇನ್ ಪರವಾಗಿ ನಿಂತಿದೆ. ಒಂದು ವೇಳೆ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದರೆ ತಾನು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಎಚ್ಚರಿಕೆ ನೀಡಿದ್ದಾರೆ. ಇದರ ಜತೆಯಲ್ಲೇ ರಷ್ಯಾಗೆ ಚೀನ ಬೆಂಬಲ ನೀಡಿದ್ದು, ಒಂದು ವೇಳೆ ಅಮೆರಿಕ ಯುದ್ಧಭೂಮಿಗೆ ಬಂದರೆ ರಷ್ಯಾ ಜತೆಗೆ ಚೀನವನ್ನು ಎದುರಿಸಬೇಕಾಗುತ್ತದೆ. ಆಗ ಜಗತ್ತಿನ ದೊಡ್ಡ ಶಕ್ತಿಗಳೆಲ್ಲ ಕೂಡಿ ಮತ್ತೂಂದು ಯುದ್ಧಕ್ಕೆ ಸಾಕ್ಷಿಯಾಗಬೇಕಾಗುತ್ತದೆ.
ಸದ್ಯ ಈಗ ಜಗತ್ತಿಗೆ ಯುದ್ಧ ಬೇಕಾಗಿಲ್ಲ. ಹಿಂದಿನ ಕಾಲದ ಹಾಗೆ ಶಸ್ತ್ರಾಸ್ತ್ರ ಹಿಡಿದು ಯುದ್ಧವನ್ನು ನಡೆಸಬೇಕಾಗಿಯೂ ಇಲ್ಲ. ಈಗಲೇ ಪರೋಕ್ಷ ಯುದ್ಧಗಳನ್ನು ನಾವು ಬೇರೆ ಬೇರೆ ರೀತಿಯಲ್ಲಿ ನೋಡುತ್ತಿದ್ದೇವೆ. ಹೀಗಾಗಿ ಅಮೆರಿಕ, ರಷ್ಯಾ, ಚೀನದಂಥ ದೇಶಗಳು ಯುದ್ಧದ ಬಗ್ಗೆ ಮಾತನಾಡದೆ ಮನುಕುಲದ ಏಳಿಗೆಯತ್ತ ಮಾತ್ರ ಗಮನಹರಿಸಬೇಕು.