Advertisement
ಹೌದು. ಸಮಾವೇಶದ ವೇಳೆ ರಷ್ಯಾ ಸಚಿವರ ವಿಡಿಯೋ ಸಂದೇಶ ತೆರೆಯ ಮೇಲೆ ಮೂಡುತ್ತಿದ್ದಂತೆ, ಅಲ್ಲಿದ್ದ ಬಹುತೇಕ ಎಲ್ಲ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಬೆನ್ನು ಹಾಕಿ, ಹೊರನಡೆದಿದ್ದಾರೆ. ಈ ಮೂಲಕ ರಷ್ಯಾಗೆ “ಬಹಿಷ್ಕಾರ’ದ ಸಂದೇಶ ರವಾನಿಸಿದ್ದಾರೆ.
ಯುರೋಪಿಯನ್ ಸಂಸತ್‌ನಲ್ಲಿ ಭಾವುಕ ಭಾಷಣ ಮಾಡಿದ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರಿಗೆ ಚಪ್ಪಾಳೆಯ ಸುರಿಮಳೆಯಾಗಿದೆ. ಉಕ್ರೇನ್‌ನ ಐರೋಪ್ಯ ಒಕ್ಕೂಟದ ಸದಸ್ಯತ್ವ ನೀಡುವಂತೆ ಝೆಲೆನ್‌ಸ್ಕಿ ಕೋರಿಕೊಂಡಿದ್ದಾರೆ. “ನಾನು ಕಾಗದದಲ್ಲಿ ಬರೆದ ಭಾಷಣ ಓದುತ್ತಿಲ್ಲ, ಆ ಕಾಲ ಮುಗಿಯಿತು. ನಮಗೀಗ ಜೀವನ್ಮರಣ ಹೋರಾಟದ ಸಮಯ. ನೀವಿಲ್ಲದಿದ್ದರೆ ನಾವು ಏಕಾಂಗಿಯಾಗುತ್ತೇವೆ. ನಾವೂ ಕೂಡ ನಿಮ್ಮಂತೆಯೇ. ನಮ್ಮ ಕೈಬಿಡುವುದಿಲ್ಲ ಎಂಬ ಭರವಸೆ ನೀಡಿ. ಆಗ ಮಾತ್ರ ಸಾವನ್ನು ಬದುಕು ಜಯಿಸಲು ಸಾಧ್ಯ’ ಎಂದು ಝೆಲೆನ್‌ಸ್ಕಿ ಹೇಳುತ್ತಿದ್ದಂತೆ, ಎದ್ದುನಿಂತ ಸಂಸದರು ದೀರ್ಘಕಾಲ ಚಪ್ಪಾಳೆ ತಟ್ಟುತ್ತಾ ಅವರಿಗೆ ಗೌರವ ಸೂಚಿಸಿದ್ದಾರೆ. ಈ ವೇಳೆ ಹಲವರ ಕಣ್ಣಾಲಿಗಳೂ ತುಂಬಿಬಂದಿವೆ.
Related Articles
Advertisement
ಯಾರೊಬ್ಬರೂ ಮರೆಯಲ್ಲ, ಯಾರೊಬ್ಬರೂ ಕ್ಷಮಿಸಲ್ಲ“ರಷ್ಯಾ ಒಂದು ಭಯೋತ್ಪಾದಕ ದೇಶ. ಖಾರ್ಕಿವ್ ನಗರದ ಸೆಂಟ್ರಲ್ ಸೆðàರ್‌ನಲ್ಲಿ ನಡೆಸಿದ ದಾಳಿಯು ಸ್ಪಷ್ಟವಾಗಿ ಉಗ್ರರ ದಾಳಿಯೇ ಆಗಿದೆ. ವ್ಲಾದಿಮಿರ್ ಪುಟಿನ್ ಅವರೇ ನೆನಪಿಟ್ಟುಕೊಳ್ಳಿ, “ಇದನ್ನು ಯಾರೊಬ್ಬರೂ ಮರೆಯಲ್ಲ, ಯಾರೊಬ್ಬರೂ ಕ್ಷಮಿಸಲ್ಲ…’ ಹೀಗೆಂದು ಭಾವುಕರಾಗಿ ನುಡಿದಿದ್ದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ. ತನ್ನ ದೇಶದ ಹಲವು ನಗರಗಳಲ್ಲಿ ನಿರಂತರ ದಾಳಿ ಮುಂದುವರಿದ ಹಿನ್ನೆಲೆಯಲ್ಲಿ ನೊಂದ ಝೆಲೆನ್‌ಸ್ಕಿ ಈ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಶಾಂತಿಯುತ ಉಕ್ರೇನಿಯನ್ನರನ್ನು ಕೊಂದಿರುವ ನಿಮ್ಮನ್ನು ಜಗತ್ತಿನ ಯಾರೂ ಕ್ಷಮಿಸಲಾರರು. ಉಕ್ರೇನ್‌ನಲ್ಲಿ ನೀವು ಕ್ಲಸ್ಟರ್ ಬಾಂಬ್‌ಗಳನ್ನು ಹಾಕಿದ್ದೀರಿ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಅದರ ಬಳಕೆ ನಿಷಿದ್ಧ. ಅಂತಾರಾಷ್ಟ್ರೀಯ ನ್ಯಾಯಾಲಯವೂ ಆದಷ್ಟು ಬೇಗ ನಿಮ್ಮ ವಿರುದ್ಧ ವಿಚಾರಣೆ ಆರಂಭಿಸಲಿದೆ ಎಂದೂ ಹೇಳಿದ್ದಾರೆ.