Advertisement

ರಷ್ಯಾ ವಿಕ್ಟರಿ ಡೇ ದಾಳಿ: ಜಿ 7 ನಾಯಕರ ಮಹತ್ವದ ಏಕತೆ ಪ್ರದರ್ಶನ

10:31 AM May 08, 2022 | Team Udayavani |

ವಾಷಿಂಗ್ಟನ್ : ರಷ್ಯಾವು ತನ್ನ ವಿಶ್ವ ಯುದ್ಧದ ವಿಜಯವನ್ನು ವಿಕ್ಟರಿ ಡೇ ಹೆಸರಿನಲ್ಲಿ ಆಚರಿಸಲು ಸಿದ್ಧತೆ ನಡೆಸಿ ಉಕ್ರೇನ್‌ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಯುಎಸ್ ಅಧ್ಯಕ್ಷ ಜೋ ಬಿಡೆನ್ ಸೇರಿದಂತೆ ಏಳು (ಜಿ 7) ನಾಯಕರ ಗುಂಪು ಭಾನುವಾರ (ಮೇ 8) ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ವರ್ಚುವಲ್ ಸಭೆಯಲ್ಲಿ ಭಾಗಿಯಾಗಿ ಏಕತೆಯ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

Advertisement

ಭಾನುವಾರ ಬೆಳಿಗ್ಗೆ, ಅಧ್ಯಕ್ಷ ಬಿಡೆನ್ ಅವರು ಜರ್ಮನ್ ಚಾನ್ಸೆಲರ್ ಸ್ಕೋಲ್ಜ್ ಅವರ ಅಧ್ಯಕ್ಷತೆಯಲ್ಲಿ G7 ವರ್ಚುವಲ್ ನಾಯಕರ ಸಭೆಯಲ್ಲಿ ಭಾಗವಹಿಸುತ್ತಾರೆ. ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್ಕಿಯವರು ಸೇರುತ್ತಾರೆ” ಎಂದು ರಾಷ್ಟ್ರೀಯ ಭದ್ರತಾ ಮಂಡಳಿ (NSC) ವಕ್ತಾರರು ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿ ರಷ್ಯಾದ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಜಿ7 ನಾಯಕರು ಚರ್ಚಿಸಲಿದ್ದಾರೆ. ಮಾತುಕತೆಗಳು ಉಕ್ರೇನ್ ಅನ್ನು ಬಲಪಡಿಸುವ ಪ್ರಯತ್ನಗಳು, ಪುತಿನ್ ಯುದ್ಧಕ್ಕೆ ತೀವ್ರವಾದ ದಂಡವನ್ನು ತೆರುವುದು ಸೇರಿದಂತೆ ಸಾಮೂಹಿಕ ಪ್ರತಿಕ್ರಿಯೆಯಲ್ಲಿ ಮುಂದುವರಿದ G7 ಏಕತೆಯನ್ನು ಪ್ರದರ್ಶಿಸುವ ಮಾರ್ಗಗಳ ಮೇಲೆ ಕೇಂದ್ರೀಕರಿಸುತ್ತವೆ ಎಂದು ತಿಳಿಸಲಾಗಿದೆ.

ಜಿ 7 ನಾಯಕತ್ವ ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಫ್ರಾನ್ಸ್, ಜರ್ಮನಿ, ಜಪಾನ್, ಕೆನಡಾ ಮತ್ತು ಇಟಲಿಯನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next