Advertisement

ಯಾವ ಪುರುಷಾರ್ಥಕ್ಕೆ ಈ ಯುದ್ಧ?

12:58 AM Mar 06, 2022 | Team Udayavani |

ಈ ಫೋಟೋವನ್ನು ನೋಡಿದರೆ ಯಾವ ಕಲ್ಲುಹೃದಯವೂ ಕರಗದೇ ಇರದು. ಇನ್ನೇನು ಒಂದೆರಡು ಕ್ಷಣ ಕಳೆದಿದ್ದರೆ, ಆ ಕುಟುಂಬವು ಯುದ್ಧದ ಕರಾಳತೆಯಿಂದ ಹೊರಗೆ ಕಾಲಿಡುತ್ತಿತ್ತು.

Advertisement

ಆದರೆ, ಶೆಲ್‌ ದಾಳಿಯಿಂದ ಸಿಡಿದ ಮೊಳೆಯೊಂದು ಉಕ್ರೇನ್‌ನ ಈ ದಂಪತಿಯ ಕರುಳಕುಡಿಯ ಪ್ರಾಣವಾಯುವನ್ನೇ ಕಸಿದುಕೊಂಡು ಬಿಟ್ಟಿದೆ. ಮರಿಯುಪೋಲ್‌ನಲ್ಲಿ ಶನಿವಾರ ರಷ್ಯಾ ಸೇನೆಯು ನಿರಂತರವಾಗಿ ಶೆಲ್‌ ದಾಳಿ ನಡೆಸಿತ್ತು.

ಈ ವೇಳೆ, ಅಲ್ಲಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ದಂಪತಿಯ 18 ತಿಂಗಳ ಹಸುಗೂಸುವಿನ ದೇಹವನ್ನು ಮೊಳೆಯು ಹೊಕ್ಕೇಬಿಟ್ಟಿತು. ರಕ್ತಸಿಕ್ತ ಕುಡಿಯನ್ನು ಎದೆಗವಚಿಕೊಂಡು ಹೆತ್ತವರು ಆಸ್ಪತ್ರೆಗೆ ಧಾವಿಸಿದರು. ಆದರೆ, ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ ಮಗು ಬದುಕುಳಿಯಲಿಲ್ಲ. ಒಂದೆಡೆ, ಮಗುವಿನ ನಿಶ್ಚಲ ದೇಹದ ಮುಂದೆ ಕಣ್ಣೀರಿಡುತ್ತಿದ್ದ ಹೆತ್ತವರು, ಮತ್ತೊಂದು ಕಡೆ ಹಸುಗೂಸನ್ನು ಕೊನೆಗೂ ಬದುಕುಳಿಸಲು ಆಗಲಿಲ್ಲವಲ್ಲಾ ಎಂದು ಕುಸಿದು ಕುಳಿತಿರುವ ವೈದ್ಯ… ಈ ಎರಡು ಚಿತ್ರಗಳೇ ಸಾಕು “ಯಾವ ಪುರುಷಾರ್ಥಕ್ಕೆ ಈ ಯುದ್ಧ’ ಎಂಬ ಪ್ರಶ್ನೆ ಮೂಡಲು.

Advertisement

Udayavani is now on Telegram. Click here to join our channel and stay updated with the latest news.

Next