Advertisement
– ಇದು ಯುದ್ಧ ಪೀಡಿತ ಉಕ್ರೇನ್‌ನ ಈಶಾನ್ಯ ಭಾಗದ ನಗರ ಸುಮಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿದ್ಯಾರ್ಥಿಗಳು ದುಃಖ ತೋಡಿಕೊಂಡ ಪರಿ. ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಇಲ್ಲವೆಂದು ದೂರಿದ್ದಾರೆ. ಹೀಗಾಗಿ, ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದು, ಕ್ಷಿಪ್ರವಾಗಿ ರಕ್ಷಿಸುವಂತೆ ಕೋರಿಕೆ ಸಲ್ಲಿಸಿದ್ದಾರೆ. ಅವರೆಲ್ಲರೂ ಸುಮಿ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದಾರೆ.
Related Articles
ಯುದ್ಧಪೀಡಿತ ಉಕ್ರೇನ್‌ನಲ್ಲಿ 1 ಸಾವಿರ ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ಪೈಕಿ ಸುಮಿಯಲ್ಲಿ 700, 300 ಮಂದಿ ಖಾರ್ಕಿವ್‌ನಲ್ಲಿ ಇದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರನ್ನು ಪಾರು ಮಾಡುವುದೇ ಸರ್ಕಾರದ ಆದ್ಯತೆ. ಬಸ್‌ಗಳ ಮೂಲಕ ಅವರನ್ನು ಗಡಿ ದಾಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ. ಇನ್ನೂ 2ರಿಂದ 3 ಸಾವಿರ ಮಂದಿ ಭಾರತೀಯರು ಇದ್ದಾರೆ. ಆಪರೇಷನ್ ಗಂಗಾ ಮೂಲಕ ಆ ದೇಶದಿಂದ ಎಲ್ಲರನ್ನೂ ಪಾರು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಸ್ಥಳೀಯವಾಗಿ ಕದನ ವಿರಾಮ ಉಂಟಾದರೆ ಕೊಂಚ ಅನುಕೂಲವಾಗಲಿದೆ ಎಂದರು ಬಗಚಿ. ಮುಂದಿನ 24 ಗಂಟೆಗಳಲ್ಲಿ 16 ವಿಮಾನಗಳ ಮೂಲಕ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದರು. ಫೆ.15ರ ಬಳಿಕ ಸುಮಾರು 20 ಸಾವಿರ ಮಂದಿ ಉಕ್ರೇನ್ ಗಡಿ ದಾಟಿದ್ದಾರೆ ಎಂದರು. ಇದುವರೆಗೆ 48 ವಿಮಾನಗಳ ಮೂಲಕ 10,300 ಮಂದಿ ವಿದ್ಯಾರ್ಥಿಗಳು ದೇಶಕ್ಕೆ ಆಗಮಿಸಿದ್ದಾರೆ ಎಂದರು.
Advertisement
ಇಂದು 11 ವಿಮಾನ ಆಗಮನ: 11 ವಿಮಾನ ಮತ್ತು ಐಎಎಫ್ನ 4 ವಿಮಾನಗಳ ಮೂಲಕ ಶನಿವಾರ 2,200ಕ್ಕೂ ಅಧಿಕ ಮಂದಿ ದೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ. ಶುಕ್ರವಾರ 14 ವಿಮಾನಗಳು, ಐಎಎಫ್ನ ಮೂರು ವಿಮಾನಗಳ 3,772 ಮಂದಿ ಆಗಮಿಸಿದ್ದಾರೆ.