Advertisement

ವಿಶ್ವಸಂಸ್ಥೆ ಮಧ್ಯೆಪ್ರವೇಶಿಸಿ ಯುದ್ಧ ನಿಲ್ಲಿಸಲಿ

12:14 AM Feb 25, 2022 | Team Udayavani |

ರಷ್ಯಾ ಗುರುವಾರ ಉಕ್ರೇನ್‌ ವಿರುದ್ಧ ಬಹಿರಂಗ ಸಮರ ಆರಂಭಿಸಿದೆ. ಕಳೆದೊಂದು ತಿಂಗಳಿಂದೀಚೆಗೆ ಉಲ್ಬಣಿಸಿದ್ದ ಈ ಎರಡು ರಾಷ್ಟ್ರಗಳ ನಡುವಣ ಬಿಕ್ಕಟ್ಟನ್ನು ಶಮನಗೊಳಿಸಲು ವಿಶ್ವಸಂಸ್ಥೆ ಆದಿಯಾಗಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಪ್ರಯತ್ನಗಳು ನಡೆಯದೇ ಇದ್ದುದರಿಂ ದಾಗಿ ಮೂರನೇ ವಿಶ್ವಯುದ್ಧದ ಭೀತಿ ಈಗ ಜಗತ್ತನ್ನು ಕಾಡುವಂತಾಗಿದೆ.

Advertisement

ಉಕ್ರೇನ್‌ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಘೋಷಿಸಿದ ಬೆನ್ನಲ್ಲೇ ರಷ್ಯಾ ಪಡೆಗಳು ಉಕ್ರೇನ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ವೈಮಾನಿಕ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾವು ಉಕ್ರೇನ್‌ನ ರಾಜಧಾನಿ ಕೀವ್‌ ಸಹಿತ ಪ್ರಮುಖ ನಗರಗಳಲ್ಲಿನ ವಿಮಾನ ನಿಲ್ದಾಣಗಳು ಮತ್ತು ರಕ್ಷಣ ನೆಲೆಗಳನ್ನು ಗುರಿಯಾಗಿಸಿ ಗುಂಡು, ಕ್ಷಿಪಣಿ ದಾಳಿ ನಡೆಸುವ ಮೂಲಕ ಉಕ್ರೇನ್‌ ಅನ್ನು ನಲುಗುವಂತೆ ಮಾಡಿದೆ.

ಇವೆಲ್ಲದರ ನಡುವೆ ರಷ್ಯಾದ ವಿರುದ್ಧ ಪ್ರತಿದಾಳಿ ನಡೆಸಲು ಐರೋಪ್ಯ ರಾಷ್ಟ್ರಗಳು ಸನ್ನದ್ಧವಾಗಿದ್ದು ಉಕ್ರೇನ್‌ನ ಗಡಿ ರಾಷ್ಟ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಟೋ ಪಡೆಗಳನ್ನು ರವಾನಿಸಿವೆ. ಅಂತಾ ರಾಷ್ಟ್ರೀಯ ಕಾನೂನನ್ನು ಉಲ್ಲಂ ಸಿ ಉಕ್ರೇನ್‌ ವಿರುದ್ಧ ಅಪ್ರಚೋದಿತ ಮತ್ತು ನ್ಯಾಯೋಚಿತವಲ್ಲದ ದಾಳಿ ನಡೆಸಿದೆ ಎಂದು ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ರಷ್ಯಾದ ವಿರುದ್ಧ ಕಿಡಿಕಾರಿವೆ. ಉಕ್ರೇನ್‌ನಲ್ಲಿನ ತನ್ನ ಪ್ರಜೆಗಳನ್ನು ರಕ್ಷಿಸಲು ನಾವು ಬದ್ಧ ಎನ್ನುವ ಮೂಲಕ ರಷ್ಯಾದ ವಿರುದ್ಧ ತೊಡೆತಟ್ಟಿವೆ.

ರಷ್ಯಾ ಯುದ್ಧ ಘೋಷಿಸಿದ್ದರಿಂದಾಗಿ ಭಾರತ ಸಹಿತ ವಿದೇಶಗಳ ಲಕ್ಷಾಂತರ ಮಂದಿ ಇದೀಗ ಉಕ್ರೇನ್‌ನಲ್ಲಿ ಅತಂತ್ರರಾಗಿದ್ದಾರೆ. ತಮ್ಮ ಪ್ರಜೆಗಳನ್ನು ಸ್ವದೇಶಕ್ಕೆ ಮರಳಿ ಕರೆತರಲು ಪರ್ಯಾಯ ಮಾರ್ಗೋ ಪಾಯಗಳನ್ನು ಕಂಡುಕೊಳ್ಳುವ ಯತ್ನಗಳಲ್ಲಿ ಈ ದೇಶಗಳು ನಿರತವಾಗಿವೆ. ಈ ಹಿನ್ನೆಲೆಯಲ್ಲಿ ಆದಷ್ಟು ಸುರಕ್ಷಿತ ತಾಣಗಳಲ್ಲಿ ಆಶ್ರಯ ಪಡೆದುಕೊಳ್ಳುವಂತೆ ಮತ್ತು ಅಗತ್ಯ ದಾಖಲೆಪತ್ರಗಳನ್ನು ತಮ್ಮ ಬಳಿಯೇ ಇರಿಸಿಕೊಳ್ಳುವಂತೆ ತಮ್ಮ ಪ್ರಜೆಗಳಿಗೆ ಸೂಚನೆ ನೀಡಿವೆ.

ರಷ್ಯಾ-ಉಕ್ರೇನ್‌ ಯುದ್ಧ ಆರಂಭಗೊಳ್ಳುತ್ತಿದ್ದಂತೆಯೇ ಜಾಗತಿಕ ಮಾರು ಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲದ ವಾತಾವರಣ ಸೃಷ್ಟಿ ಯಾಗಿದೆ. ಕಚ್ಚಾ ತೈಲದ ಬೆಲೆ ಒಂದೇ ಸಮನೆ ಹೆಚ್ಚತೊಡಗಿದ್ದು ಭಾರತ ಸಹಿತ ಬಹು ತೇಕ ರಾಷ್ಟ್ರಗಳಲ್ಲಿ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಭಾರ ತೀಯ ಷೇರು ಮಾರುಕಟ್ಟೆ ಗುರುವಾರ 10ನೇ ಮಹಾಕುಸಿತವನ್ನು ದಾಖಲಿ ಸಿದೆ. ನ್ಯಾಟೋ ಪಡೆಗಳು ರಷ್ಯಾದ ಮೇಲೆ ಪ್ರತಿದಾಳಿ ನಡೆಸಿದ್ದೇ ಆದಲ್ಲಿ ಉಕ್ರೇನ್‌-ರಷ್ಯಾ ನಡುವಣ ಸಮರ ಮೂರನೇ ವಿಶ್ವ ಯುದ್ಧವಾಗಿ ಮಾರ್ಪ ಡುವುದು ಬಹುತೇಕ ನಿಶ್ಚಿತ. ಹೀಗಾದಲ್ಲಿ ಈ ಯುದ್ಧದ ನೇರ ಪರಿ ಣಾಮವನ್ನು ಇಡೀ ಜಾಗತಿಕ ಸಮುದಾಯ ಎದುರಿಸಬೇಕಾಗಿ ಬರಲಿದೆ.

Advertisement

ಏತನ್ಮಧ್ಯೆ ಯುದ್ಧ ಸ್ಥಗಿತಗೊಳಿಸುವಂತೆ ರಷ್ಯಾದ ಮನವೊಲಿಸುವಂತೆ ಉಕ್ರೇನ್‌ ರಾಯಭಾರಿ ಭಾರತ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಭಾರತ ಮಾತ್ರ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದು ಶಾಂತಿ ಕಾಯ್ದುಕೊಳ್ಳುವಂತೆ ರಷ್ಯಾ, ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಮನವಿ ಮಾಡಿಕೊಂಡಿದೆ. ಎಲ್ಲ ವಿಚಾರಗಳನ್ನು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವಂತೆಯೂ ಕಿವಿಮಾತು ಹೇಳಿದೆ.

ವಿಶ್ವದಲ್ಲಿ ಶಾಂತಿ ಕಾಯ್ದುಕೊಳ್ಳಲೆಂದೇ ಸ್ಥಾಪಿತವಾಗಿರುವ ವಿಶ್ವಸಂಸ್ಥೆ ತತ್‌ಕ್ಷಣ ಮಧ್ಯಪ್ರವೇಶಿಸಿ ಯುದೊœàನ್ಮಾದದಲ್ಲಿರುವ ಪ್ರಬಲ ರಾಷ್ಟ್ರಗಳಿಗೆ ತಿಳಿಹೇಳಬೇಕು. ಈ ಕೂಡಲೇ ಯುದ್ಧ ಸ್ಥಗಿತಕ್ಕೆ ನಿರ್ದೇಶ ನೀಡುವುದರ ಜತೆಯಲ್ಲಿ ರಷ್ಯಾ-ಉಕ್ರೇನ್‌ ನಡುವೆ ತಲೆದೋರಿರುವ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳ ನಾಯಕರ ಜತೆ ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next