Advertisement
ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ 22 ಮಂದಿ ಗಾಯಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಇದೇ ನಗರದಲ್ಲಿ ನಡೆದಿದ್ದ ಶೆಲ್ ದಾಳಿಯ ಸಂದರ್ಭದಲ್ಲಿ ಗಾಯಗೊಂಡಿದ್ದ ಬಾಲಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಗವರ್ನರ್ ತಿಳಿಸಿದ್ದಾರೆ. ಇದೇ ವೇಳೆ, ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದಾಗಿನಿಂದ ಇಲ್ಲಿಯವರೆಗೆ ಉಕ್ರೇನ್‌ನ ಬಂದರು ನಗರವಾದ ಮರಿಯುಪೋಲ್‌ನಲ್ಲಿ 21 ಸಾವಿರ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮರಿಯುಪೋಲ್ ಮೇಯರ್ ವಾಡಿಮ್ ಬಾಯೆcನ್ಕೋ ತಿಳಿಸಿದ್ದಾರೆ.
ಶವಗಳು ತುಂಬಿವೆ ಎಂದು ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದಿಂದ ಹೊಸ ಉಗ್ರವಾದ: “ಉಕ್ರೇನ್ ಮೇಲೆ ಹೊಸ ಹೊಸ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸುವ ಮೂಲಕ ರಷ್ಯಾ ದೇಶ, ಹೊಸ ಮಾದರಿಯ ಉಗ್ರವಾದವನ್ನು ಹುಟ್ಟುಹಾಕಿದೆ” ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ದೀರ್ಘಕಾಲದಲ್ಲಿ ಜನರಿಗೆ ಮಾರಕವಾಗಿ ಪರಿಗಣಿಸಬಹುದಾದ ರಾಸಾಯನಿಕಗಳನ್ನು ನಾಗರಿಕರು ವಾಸಿಸುವ ಸ್ಥಳಗಳಲ್ಲಿ ಪ್ರಯೋಗಿಸಲಾಗಿದೆ. ಈ ರೀತಿಯ ಮಂದ ವಿಷ ಎನ್ನಬಹುದಾದ ಅಸ್ತ್ರಗಳನ್ನು ಬಳಸುವ ಮೂಲಕ ರಷ್ಯಾ ಹೊಸ ರೀತಿಯ ಉಗ್ರವಾದ ದಾಳಿಯನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.
Related Articles
ರಷ್ಯಾದ ಪ್ರಭಾವಿ ರಾಜಕಾರಣಿಗಳಲ್ಲೊಬ್ಬರಾದ ವಿಕ್ಟರ್ ಮೆಡ್ವೆಡ್‌ಚುಕ್ ಎಂಬವರನ್ನು ತಾನು ಬಂಧಿಸಿರುವು ದಾಗಿ ಉಕ್ರೇನ್ ಹೇಳಿಕೊಂಡಿದೆ. ಇದರ ಫೋಟೋವನ್ನು ಪ್ರಕಟಿ ಸಿರುವ ಉಕ್ರೇನ್‌ನ ಅಧಿಕಾ ರಿ ಗಳು, “ಈ ಫೋಟೋದಲ್ಲಿರುವ ವ್ಯಕ್ತಿಯು ಬೇಕೆಂದರೆ, ಅದಕ್ಕೆ ಪ್ರತಿರೂಪವಾಗಿ ನೀವು ಹಿಡಿದಿ ಟ್ಟು ಕೊಂಡಿರುವ ಉಕ್ರೇನ್‌ನ ಯೋಧರು, ಯುವತಿಯರನ್ನು ಬಿಡುಗಡೆ ಮಾಡ ಬೇಕು ಎಂದು ಉಕ್ರೇನ್ ರಷ್ಯಾಕ್ಕೆ ತಾಕೀತು ಮಾಡಿದೆ. ಆದರೆ, ಈ ಫೋಟೋದ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾ, ಈ ಫೋಟೋದಲ್ಲಿರುವ ವ್ಯಕ್ತಿ ವಿಕ್ಟರ್ ಎಂಬುದು ಮನದಟ್ಟಾಗಿದೆ. ಆದರೆ, ಅವರು ಉಕ್ರೇನ್‌ನ ಬಂಧನದಲ್ಲಿ ರುವ ಬಗ್ಗೆ ಖಚಿತತೆ ಇಲ್ಲ ಎಂದಿದೆ.
Advertisement
ಪುತಿನ್‌ಗೆ ವಿವೇಚನೆ ಇಲ್ಲ: ಬರಾಕ್ ಒಬಾಮಾಉಕ್ರೇನ್ನ ಮೇಲೆ ದಾಳಿ ನಡೆಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಒಬ್ಬ ವಿವೇಚನೆ ಹಾಗೂ ಮುಂದಾಲೋಚನೆ ಇಲ್ಲದ ನಾಯಕ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಟೀಕಿಸಿದ್ದಾರೆ. ಅಮೆರಿಕದ ಎನ್‌ಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “”ಪುತಿನ್ ತನ್ನ ರಷ್ಯಾ ಪ್ರಜೆಗಳ ಬಗ್ಗೆಯೇ ನಿರ್ದಯೆಯಿಂದ ನಡೆದುಕೊಳ್ಳುವಂಥವರು. ದ್ವಂದ್ವ ನಿಲುವುಗಳು, ಆಲೋಚನೆಗಳಲ್ಲಿ ಕುಂದು ಕೊರತೆಯಿರುವಂಥ ವ್ಯಕ್ತಿ. ಇವನ್ನು ಮರೆಮಾಚಲು ಅವರು ರಾಷ್ಟ್ರೀಯತೆ, ಧರ್ಮ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದ ಕಾರ್ಯಾಚರಣೆಗಳನ್ನು ಅನುಸರಿಸುತ್ತಲೇ ಇರುತ್ತಾರೆ” ಎಂದು ಅವರು ತಿಳಿಸಿದ್ದಾರೆ. ಶಾಂತಿ ಮಾತುಕತೆ ಮುಗಿದ ಅಧ್ಯಾಯ
ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸಲು ಅಮೆರಿಕ, ನ್ಯಾಟೋ ಸದಸ್ಯ ರಾಷ್ಟ್ರಗಳು ಹಾಗೂ ಜಗತ್ತಿನ ನಾನಾ ದೇಶಗಳು ನಡೆಸುತ್ತಿದ್ದ ಶಾಂತಿ ಮಾತುಕತೆಯ ಪ್ರಯತ್ನ ಒಂದು ಮುಗಿದ ಅಧ್ಯಾಯ ಎಂದು ರಷ್ಯಾದ ಅಧ್ಯಕ್ಷ ಪುತಿನ್ ತಿಳಿಸಿದ್ದಾರೆ. ಶಾಂತಿ ಮಾತುಕತೆಗಳು ರಷ್ಯಾದ ಹಿತಾಸಕ್ತಿಗೆ ಪೂರಕವಾಗಿಲ್ಲ. ಹಾಗಾಗಿ, ನಾವು ನಮ್ಮ ದಾಳಿಯನ್ನು ಮುಂದುವರಿಸುತ್ತೇವೆ. ಉಕ್ರೇನ್ ಮೇಲೆ ದಾಳಿ ನಡೆಸುವ ವಿಚಾರದಲ್ಲಿ ಪೂರ್ವಯೋಜಿತವಾಗಿ ಕಾರ್ಯತಂತ್ರಗಳನ್ನು ರೂಪಿಸಿದೆಯೋ ಅವೆಲ್ಲವನ್ನೂ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.