Advertisement

ಯುದ್ಧದಿಂದ ಭಾರತದ ಕೃಷಿ ಕ್ಷೇತ್ರದ ಮೇಲೆ ಪರಿಣಾಮದ ಬಗ್ಗೆ ಚಿಂತೆ

03:00 PM Feb 28, 2022 | Team Udayavani |

ನವದೆಹಲಿ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ವಿಶೇಷವಾಗಿ ರಫ್ತಿನ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಭಾರತ ಹೆಚ್ಚು ಚಿಂತಿತವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.

Advertisement

ಕಾರ್ಯಕ್ರಮವೊಂದರಲ್ಲಿ ಉದ್ಯಮ ರಂಗದ ನಾಯಕರೊಂದಿಗೆ ಸಂವಾದ ನಡೆಸಿದ ಸೀತಾರಾಮನ್, ಈ ವಿಷಯವನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸಿದ್ದು,”ಸಂಪೂರ್ಣ ಮೌಲ್ಯಮಾಪನ” ಕ್ಕಾಗಿ ಸಚಿವಾಲಯಗಳ ನಡುವೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.

ರಷ್ಯಾ ಮತ್ತು ಯುದ್ಧದಿಂದ ಹಾನಿಗೊಳಗಾದ ಉಕ್ರೇನ್ ದೇಶಗಳಿಂದ ಆಮದು ಮತ್ತು ರಫ್ತಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ನಮ್ಮ ತಕ್ಷಣದ ಆಮದುಗಳ ಮೇಲೆ ಮತ್ತು ಉಕ್ರೇನ್‌ಗೆ ನಮ್ಮ ರಫ್ತುಗಳ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದರ ಕುರಿತು ನಾವು ಚಿಂತಿಸುತ್ತಿದ್ದೇವೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ರಫ್ತುದಾರರಿಗೆ ಏನಾಗಲಿದೆ ಎಂಬುದರ ಬಗ್ಗೆ ನಾನು ಹೆಚ್ಚು ಚಿಂತಿತಳಾಗಿದ್ದೇನೆ ಎಂದರು.

ತುರ್ತು ಪರಿಸ್ಥಿತಿಯನ್ನು ನೋಡುವಾಗ ಆದರೆ ನಾನು ವಿವಿಧ ಸಂಬಂಧಿತ ಸಚಿವಾಲಯಗಳ ಮೂಲಕ ಸಂಪೂರ್ಣ ಮೌಲ್ಯಮಾಪನವನ್ನು ಮಾಡಬೇಕಾಗಿದೆ ಮತ್ತು ನಂತರ ಮಾತ್ರ ಅದರ ಬಗ್ಗೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿರುತ್ತೇನೆ. ಆದಾಗ್ಯೂ, ಉಕ್ರೇನ್‌ನಿಂದ ಬರುವ ಖಾದ್ಯ ತೈಲದಂತಹ ಅಗತ್ಯ ವಸ್ತುಗಳ ಮೇಲೆ ಪರಿಣಾಮ ಬೀರಲಿರುವುದರಿಂದ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.