Advertisement

ಭಾರತದ ಚುನಾವಣೆ ರಷ್ಯಾ ಪ್ರಭಾವ?

06:00 AM Aug 03, 2018 | Team Udayavani |

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಪ್ರಭಾವ ಬೀರಿತ್ತು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪ ಮಾಡಿದ್ದರು. ಇದೀಗ, ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಮತ್ತು ಬ್ರೆಜಿಲ್‌ನಲ್ಲಿ ನಡೆಯಲಿರುವ ಚುನಾವಣೆಯನ್ನು ಗುರಿಯಾಗಿಸಲಿದೆ ಎಂದು ಆಕ್ಸ್‌ಫ‌ರ್ಡ್‌ ವಿವಿಯ ಇಂಟರ್‌ನೆಟ್‌ ಇನ್ಸ್ಟಿಟ್ಯೂಟ್‌ನ ಪ್ರೊಫೆಸರ್‌ ಫಿಲಿಪ್‌ ಎನ್‌.ಹೊವಾರ್ಡ್‌ ಸೆನೆಟ್‌ನ ಸಾಮಾ ಜಿಕ ಜಾಲತಾಣಗಳ ಮೇಲೆ ವಿದೇಶಿ ಪ್ರಭಾವ ಮತ್ತು ಗುಪ್ತಚರ ಸಮಿತಿಗೆ ಎಚ್ಚರಿಕೆ ನೀಡಿದ್ದಾರೆ. 

Advertisement

ಆದರೆ ಹೊವಾರ್ಡ್‌ ತಮ್ಮ ಆರೋಪಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ. ಆದರೆ ಅಮೆರಿಕಕ್ಕಿಂತ ಪರಿಸ್ಥಿತಿ ಇತರೆಡೆ ಭೀಕರವಾಗಿರಬಹುದು ಎಂದಿದ್ದಾರೆ. ಮುಂದಿನ ವರ್ಷಗಳಲ್ಲಿ ಚುನಾವಣೆ ನಡೆಯಲಿರುವ ಇತರ ರಾಷ್ಟ್ರಗಳ ಮೇಲೂ ರಷ್ಯಾ ತನ್ನ ಪ್ರಭಾವ ಬೀರಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next