Advertisement

ರಾಕೆಟ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಉಳಿಸಿಕೊಂಡ ರಷ್ಯಾ ;ವಿಡಿಯೋ

07:35 PM Mar 03, 2022 | Team Udayavani |

ಮಾಸ್ಕೋ : ಉಕ್ರೇನ್ ಮೇಲಿನ ತನ್ನ ಪೂರ್ಣ ಪ್ರಮಾಣದ ದಾಳಿಯ ಬಗ್ಗೆ ರಷ್ಯಾ ತೀವ್ರ ಜಾಗತಿಕ ಹಿನ್ನಡೆಯನ್ನು ಎದುರಿಸುತ್ತಿದೆ, ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮಾಸ್ ಮುಖ್ಯಸ್ಥ ಡಿಮಿಟ್ರಿ ರೊಗೊಜಿನ್ ಅವರು ಬುಧವಾರ ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಕಾರ್ಮಿಕರು ಜಪಾನ್, ಯುಎಸ್ಎ ಮತ್ತು ಇಂಗ್ಲೆಂಡ್ ನ ಧ್ವಜಗಳನ್ನು ತೆರವು ಮಾಡಿದ್ದಾರೆ.

Advertisement

ಜಪಾನ್, ಯುಎಸ್ ಮತ್ತು ಯುಕೆ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿವೆ, ಆದರೆ ಭಾರತವು ಮಾಸ್ಕೋವನ್ನು ಅದರ ಕ್ರಮಗಳಿಗಾಗಿ ನೇರವಾಗಿ ಟೀಕೆಯನ್ನು ಮಾಡದೇ ತಟಸ್ಥ ಧೋರಣೆ ಅನುಸರಿಸಿದೆ.

ಕಝಕಿಸ್ಥಾನ್‌ನ ಬೈಕೊನೂರ್ ಕಾಸ್ಮೋಡ್ರೋಮ್‌ನಲ್ಲಿರುವ ಸೋಯುಜ್ ರಾಕೆಟ್‌ನಲ್ಲಿ, ಕೆಲವು ದೇಶಗಳ ಧ್ವಜಗಳಿಲ್ಲದೆಯೇ ನಮ್ಮ ರಾಕೆಟ್ ಹೆಚ್ಚು ಸುಂದರವಾಗಿ ಕಾಣುತ್ತದೆ ಎಂದು ನಿರ್ಧರಿಸಲಾಗಿದೆ, ”ಎಂಬ  ಡಿಮಿಟ್ರಿ ರೊಗೊಜಿನ್ ಅವರ ಟ್ವೀಟ್ ಅನ್ನು ರಷ್ಯನ್ ಭಾಷೆಯಿಂದ ಸ್ಥೂಲವಾಗಿ ಅನುವಾದಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next