ವಾಷಿಂಗ್ಟನ್ : ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಎಬಿಸಿ ನ್ಯೂಸ್ ಗೆ ನೀಡಿದ್ದ ಸಂದರ್ಶನದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ‘ಹಂತಕ’ ಅಮೆರಿಕಾದ ಚುನಾವಣೆಯಲ್ಲಿ ಮಧ್ಯ ಪ್ರವೇಶಿಸಿದಕ್ಕಾಗಿ ‘ಬೆಲೆ ತೆರಲಿದ್ದಾರೆ’ ಎಂದು ಹೇಳಿದ ಬೆನ್ನಲ್ಲೇ ಅಮೆರಿಕಾದ ತನ್ನ ರಾಯಭಾರಿಯನ್ನು ರಷ್ಯಾ ಮಾಸ್ಕೊಗೆ ವಾಪಾಸ್ ಕರೆಸಿಕೊಂಡಿದೆ.
ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವೆಲ್ನಿ ಅವರ ಮೇಲೆ ನಿರ್ಬಂಧವನ್ನು ವಿಧಿಸಿ, ವಿಷವುಣಿಸಲು ಪುಟಿನ್ ಆದೇಶ ನೀಡಿದ್ದಾರೆ ಎಂಬ ಆರೋಪಗಳ ಹಿನ್ನಲೆಯಲ್ಲಿ ಪುಟಿನ್ ಅವರನ್ನು ಹಂತಕ ಎಂದು ನೀವು ಕರೆಯುತ್ತೀರಾ ಎಂದು ಎಬಿಸಿ ನ್ಯೂಸ್ ಕೇಳಿದ ಪ್ರಶ್ನೆಗೆ ಬೈಡನ್ ಹೌದು ಎಂದಿದ್ದಾರೆ.
ಓದಿ : “ಬಿಳಿಯರ ಪ್ರಾಬಲ್ಯವು ಅಕ್ಷರಶಃ ನಮ್ಮನ್ನು ಕೊಲ್ಲುತ್ತಿದೆ” : ಸ್ಟೆಫನಿ ಚೋ ಆಕ್ರೋಶ
ಇನ್ನು, 2020ರಲ್ಲಿ ನಡೆದ ಅಮೆರಿಕಾದ ಚುನಾವಣೆಯ ಸಂದರ್ಭದಲ್ಲಿ ಟ್ರಂಪ್ ಅವರನ್ನು ಪ್ರೋತ್ಸಾಹಿಸಲು ವ್ಲಾದಿಮಿರ್ ಪುಟಿನ್ ಪ್ರಯತ್ನ ಪಟ್ಟಿದ್ದಾರೆ ಎಂಬ ಅಮೇರಿಕಾದ ಗುಪ್ತಚರ ವರದಿಗಳ ಬಗ್ಗೆ ಅಧ್ಯಕ್ಷ ಬೈಡನ್ ಅವರನ್ನು ಪ್ರಶ್ನಿಸಿದಾಗ “ಅವರು ಬೆಲೆ ತೆರುತ್ತಾರೆ’ ಎಂದು ಹೇಳಿದ್ದಾರೆ.
ರಷ್ಯಾದ ವಿದೆಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜ್ಹಖರೋವಾ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡದಿದ್ದರೂ “ಸಂಬಂಧಗಳು ಕಠಿಣ ಸ್ಥಿತಿಯಲ್ಲಿವೆ” ಎಂದಷ್ಟೇ ಹೇಳಿರುವುದು ಅಮೆರಿಕಾ ಹಾಗೂ ರಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಏಳುವಂತೆ ಮಾಡಿದೆ.
ಓದಿ : OYO ಭಾರತದ ವ್ಯವಹಾರವು ಈಗ EBITDA ಸಕಾರಾತ್ಮಕವಾಗಿದೆ : ರಿತೇಶ್ ಅಗರ್ವಾಲ್