Advertisement

ಅಣ್ವಸ್ತ್ರ ಬಳಸಲು ಸಿದ್ಧ; ರಷ್ಯಾದ ರಕ್ಷಣ ಕೌನ್ಸಿಲ್‌ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌

01:31 AM Mar 27, 2022 | Team Udayavani |

ಕೀವ್‌: ಉಕ್ರೇನ್‌ ಮೇಲೆ ಪರಮಾಣು ಶಸ್ತ್ರಗಳನ್ನು ಪ್ರಯೋ ಗಿಸಲು ತಾನು ಸಿದ್ಧವಿರುವುದಾಗಿ ರಷ್ಯಾ ಮತ್ತೊಮ್ಮೆ ಘೋಷಿಸಿದೆ. ರಷ್ಯಾದ ಮಾಜಿ ಅಧ್ಯಕ್ಷ ಹಾಗೂ ಹಾಲಿ ರಕ್ಷಣ ಕೌನ್ಸಿಲ್‌ನ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌ ಅವರು, ಈ ವಿಚಾರ ತಿಳಿಸಿದ್ದಾರೆ.

Advertisement

ಮಾಸ್ಕೋದಲ್ಲಿ ಸುದ್ದಿಗಾರ­ರೊಂದಿಗೆ ಮಾತನಾ­ಡಿದ ಅವರು, ಉಕ್ರೇನ್‌ ಮೇಲೆ ನಾವು ಈವರೆಗೆ ಸಾಂಪ್ರದಾ­ಯಿಕ ಹಾಗೂ ಕೆಲವಾರು ಪ್ರಬಲ ಶಸ್ತ್ರಾಸ್ತ್ರಗಳನ್ನು ಬಳಸಿ­ದ್ದೇವೆ. ಹಾಗೊಂದು ವೇಳೆ ಪರಮಾಣು ಅಸ್ತ್ರಗಳನ್ನು ಬಳಸುವುದು ಅನಿವಾ ರ್ಯವಾದರೆ ನಾವು ಯಾವುದೇ ಮುಲಾಜಿಲ್ಲದೆ ಅವುಗಳನ್ನು ಬಳಸುತ್ತೇವೆ ಎಂದಿದ್ದಾರ­ಲ್ಲದೆ, ಪರಮಾಣು ಅಸ್ತ್ರಗಳನ್ನು ಬಳಸುವುದು ನಮ್ಮ ಮುಂದಿನ ಆದ್ಯತೆಯಾಗಲಿದೆ ಎಂದು ಹೇಳಿದ್ದಾರೆ.

ವೊಲೊಡಿಮಿರ್‌ ಟೀಕೆ: ತನ್ನಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಪದೇ ಪದೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಷ್ಯಾವು, ವಿನಾಶಕಾರಿ ಶಸ್ತ್ರಾಸ್ತ್ರಗಳ ಬಳಕೆಗೆ ಪ್ರಚೋದನೆಯನ್ನು ನೀಡುತ್ತಿದೆ ಎಂದು ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ.

ರಷ್ಯಾ ಕರೆಗಳ ಕದ್ದಾಲಿಕೆ?
ರಣಾಂಗಣದಲ್ಲಿ ರಷ್ಯಾದ ಸೈನಿಕರು ಹಾಗೂ ಸೇನಾಧಿಕಾರಿಗಳು, ಸರಕಾರ ಮತ್ತು ಸೇನಾಧಿಕಾರಿಗಳ ನಡುವೆ ನಡೆಯುವ ಸಂಭಾಷಣೆಗಳನ್ನು ಉಕ್ರೇನ್‌ನ ಸೇನೆಯಲ್ಲಿರುವ ತಜ್ಞರು ಕದ್ದಾಲಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ರಷ್ಯಾದ ಸೈನಿಕರು, ಸೇನಾಧಿಕಾರಿಗಳು ಮೊಬೈಲ್‌ ಫೋನ್‌ಗಳು, ಅನ ಲಾಗ್‌ ರೇಡಿಯೋಗಳನ್ನು ಬಳಸುತ್ತಿದ್ದಾರೆ. ಆದರೆ ಅವುಗಳ ತರಂಗಗಳನ್ನು ಉಕ್ರೇನ್‌ನ ತಜ್ಞರು ಸುಲಭವಾಗಿ ಟ್ರಾಪ್‌ ಮಾಡುತ್ತಿದ್ದಾರೆಂದು ಹೇಳಲಾಗಿದೆ.

ಹಿರಿಯ ಸೇನಾಧಿಕಾರಿ ಸಾವು
ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾದ ಮತ್ತೂಬ್ಬ ಹಿರಿಯ ಸೇನಾಧಿಕಾರಿ ಹುತಾತ್ಮರಾಗಿ­ದ್ದಾರೆ ಎಂದು ರಷ್ಯಾದ ರಕ್ಷಣ ಇಲಾಖೆ ತಿಳಿಸಿದೆ. ಖಾರ್ಸನ್‌ನಲ್ಲಿ ಯುದ್ಧ ನಿರತರಾಗಿದ್ದಾಗ ಉಕ್ರೇನ್‌ ನಡೆಸಿದ ದಾಳಿಗೆ ಲೆ|ಜ| ಯಾಕೋವ್‌  ಸಾವನ್ನಪ್ಪಿದ್ದಾರೆ. ಅವರು ರಷ್ಯಾ ಭೂಸೇನೆಯ 49ನೇ ಕಂಬೈನ್‌ ಆರ್ಮಿಯ ಕಮಾಂಡರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Advertisement

ಭಾರತ- ಉಕ್ರೇನ್‌ ಮತ್ತೊಂದು ಪ್ರೇಮ್‌ ಕಹಾನಿ
ಉಕ್ರೇನ್‌ನಲ್ಲಿ ಪರಸ್ಪರ ಪ್ರೀತಿಸಿದ್ದ ಭಾರತ ಮೂಲದ ಪ್ರತೀಕ್‌ ಹಾಗೂ ಉಕ್ರೇನ್‌ನ ಪ್ರಜೆ ಲಿಬೊವ್‌ ಜೋಡಿ, ಇನ್ನೇನು ಯುದ್ಧ ಆರಂಭವಾಗುವು­ದಕ್ಕಿಂತ ಮುಂಚೆ ಅಲ್ಲಿಂದ ಭಾರತಕ್ಕೆ ಬಂದು ಮಾ. 1ರಂದು ಹೈದರಾಬಾದ್‌ ನಲ್ಲಿ ವಿವಾಹವಾಗಿದ್ದರು. ಅಂಥದ್ದೇ ಲವ್‌ಸ್ಟೋರಿಯೊಂದು ದಕ್ಷಿಣ ದಿಲ್ಲಿಯಲ್ಲಿ ಅನಾವರಣಗೊಂಡಿದೆ.

ಉಕ್ರೇನ್‌ನ ಆ್ಯನಾ ಹರೋಡೆಟ್ಸ್‌ಕಾ (30), ದಿಲ್ಲಿ ಹೈಕೋರ್ಟ್‌ನ ವಕೀಲ ಅನುಭವ್‌ ಭಾಸಿನ್‌ (33) ಸದ್ಯದಲ್ಲೇ ವಿವಾಹವಾಗಲಿರುವ ಜೋಡಿ. 2019ರಲ್ಲಿ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿನ ಖಾಸಗಿ ಕಂಪೆನಿಯೊಂದ­ರಲ್ಲಿ ಸೇವೆ ಸಲ್ಲಿಸುವಾಗ ಇಬ್ಬರೂ ಭೇಟಿಯಾಗಿ ಪ್ರೇಮಿಗಳಾಗಿದ್ದರು. ಅನಂತರ ಅನುಭವ್‌ ಅವರು ದಿಲ್ಲಿಗೆ ಹಿಂದಿರುಗಿದರು. ಆದರೆ ಪ್ರೀತಿ ಹಾಗೆಯೇ ಮುಂದುವರಿದಿತ್ತು. ಉಕ್ರೇನ್‌ ಯುದ್ಧ ಶುರುವಾಗಿ ಒಂದೆರಡು ದಿನಗಳಲ್ಲಿ ಭಾರತಕ್ಕೆ ಆಗಮಿಸಿದ ಆ್ಯನಾ, ಈಗ ಅನುಭವ್‌ರನ್ನು ವರಿಸಲು ಸಿದ್ಧವಾಗಿದ್ದಾರೆ.

ಸಮರಾಂಗಣದಲ್ಲಿ
-ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲು ಹವಣಿಸುತ್ತಿದೆ: ಉಕ್ರೇನ್‌ ಅಧ್ಯಕ್ಷರ ಆರೋಪ.
-ಯುದ್ಧದ ಮೊದಲ ಹಂತ ಹೆಚ್ಚಾ ಕಡಿಮೆ ಮುಗಿದಂತೆ ಎಂದು ಹೇಳಿಕೊಂಡ ರಷ್ಯಾ.
-ಪುತಿನ್‌ ಸೇನೆಯಿಂದ ಚರ್ನೋಬಿಲ್‌ ಅಣುಸ್ಥಾವರ ಸಮೀಪದ ಸ್ವಯುಟೆಕ್‌ ನಗರ ವಶ.
-ರಷ್ಯಾ ರಕ್ಷಣ ಸಚಿವ ಸಗೇì ಶಿಗೋ ಒಳಗಾಗಿದ್ದಾರೆ ಎಂಬ ವರದಿ ಸುಳ್ಳು. ಅವರು ಜೀವಂತವಾಗಿದ್ದಾರೆ: ರಷ್ಯಾ
ಕಾಳಗದಲ್ಲಿ ಇದುವರೆಗೆ 136
-ಮಕ್ಕಳು ಅಸುನೀಗಿದ್ದಾರೆ ಎಂದು ಪ್ರಕಟಿಸಿದ ಉಕ್ರೇನ್‌.
-ಖಾರ್ಶೇನ್‌ ನಗರದಲ್ಲಿ ಯುದ್ಧನಿರತ ರಷ್ಯಾದ ಹಿರಿಯ ಸೇನಾಧಿಕಾರಿ ಲೆ|ಜ| ಯಾಕೋವ್‌ ಸಾವು.

Advertisement

Udayavani is now on Telegram. Click here to join our channel and stay updated with the latest news.

Next