Advertisement
ಆದರೆ ಕಳೆದ ಮಂಗಳವಾರ ತಮ್ಮ ಸೇನೆಯ ಹಿರಿಯ ಅಧಿಕಾರಿಗಳನ್ನು ಉದ್ದೇ ಶಿಸಿ ಮಾತನಾಡಿದ್ದ ವೇಳೆ, “ಯಾವುದೇ ಕಾರಣಕ್ಕೂ ನಮ್ಮ ಉದ್ದೇಶ ಬಿಟ್ಟು ಕೊಡಲೇಬಾರದು. ಉಕ್ರೇನ್ ವತಿ ಯಿಂದ ಸಂಧಾನಕ್ಕೆ ಬರುವುದಿದ್ದರೆ ಬರಲಿ” ಎಂದು ಹೇಳಿಕೊಂಡಿದ್ದರು. ಅಮೆರಿಕ ಸರಕಾರದ ಉನ್ನತ ಮೂಲಗಳ ಪ್ರಕಾರ 2022ರ ಸೆಪ್ಟಂಬರ್‌ನಿಂದಲೇ ರಷ್ಯಾ ಅಧ್ಯಕ್ಷರು ಸಂಧಾನಕ್ಕೆ ಮುಂದಾಗಿರುವ ಬಗ್ಗೆ ಹಲವು ಸಂಕೇತಗಳನ್ನು ತೋರಿಸುತ್ತಾ ಬಂದಿದ್ದಾರೆ. ರಷ್ಯಾ ವಿರುದ್ಧ ಉಕ್ರೇನ್ ಉತ್ತರ ಭಾಗದಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಸೇನೆ ಹಲವು ಬಾರಿ ಮೇಲುಗೈ ಸಾಧಿಸಿದೆ. ಇದರ ಜತೆಗೆ ಬ್ರಿಟನ್, ಅಮೆರಿಕ ಸೇರಿದಂತೆ ಹಲವು ದೇಶಗಳ ಬೆಂಬಲ ಉಕ್ರೇನ್‌ಗೆ ಇರುವುದೂ ರಷ್ಯಾ ಅಧ್ಯಕ್ಷರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ವಿಶ್ಲೇಷಿಸಲಾಗಿದೆ.
ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಮೊದಲ ಬಾರಿಗೆ ಡಿ.25 ರಂದೇ ಕ್ರಿಸ್‌ಮಸ್ ಆಚರಿಸಲಾಗಿದೆ. ಆ ದೇಶದಲ್ಲಿ ಇದುವರೆಗೆ ನಡೆದು ಬಂದ ಪದ್ಧತಿ ಪ್ರಕಾರ ರಷ್ಯಾ ಕ್ಯಾಲೆಂಡರ್ ದಿನ ಅನುಸರಿಸುತ್ತಿದ್ದ ಸಂದರ್ಭದಲ್ಲಿ ಜ.7ರಂದು ಕ್ರಿಸ್‌ಮಸ್ ಆಚರಿಸಲಾಗುತ್ತಿತ್ತು. ರಷ್ಯಾ 2 ವರ್ಷಗಳಿಂದ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೆಡ್ಡು ಹೊಡೆದು ಐರೋಪ್ಯ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಪದ್ಧತಿಯಂತೆ ಮೊದಲ ಬಾರಿಗೆ ಡಿ. 25 ರಂದೇ ಕ್ರಿಸ್‌ಮಸ್ ಆಚರಿಸಿಕೊಳ್ಳಲಾಗಿದೆ. ಈ ಬಗ್ಗೆ ಜುಲೈಯ ಲ್ಲಿಯೇ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ 2 ದೇಶಗಳ ನಡುವಿನ ಕದನ ನಿರಂತರವಾಗಿ ಮುಂದುವರಿದಿದೆ.