Advertisement

ಕೋವಿಡ್ ನಿಯಂತ್ರಣಕ್ಕಾಗಿ ವೈದ್ಯರು, ಅಧ್ಯಾಪಕರಿಗೆ ಲಸಿಕೆ ನೀಡಲು ರಷ್ಯಾ ಸಜ್ಜು

03:01 PM Aug 02, 2020 | sudhir |

ಮಾಸ್ಕೋ: ಕೋವಿಡ್‌ ಸೋಂಕು ಇನ್ನಿಲ್ಲದಂತೆ ಏರಿಕೆ ಕಾಣುತ್ತಿರುವಂತೆ, ಅದರ ನಿಯಂತ್ರಣಕ್ಕಾಗಿ ಲಸಿಕೆ ಸಿದ್ಧಪಡಿಸಿದ್ದೇವೆ ಎಂದು ಹೇಳುತ್ತಿರುವ ರಷ್ಯಾ ಈಗ ಅದನ್ನು ಜನರಿಗೆ ನೀಡಲು ಮುಂದಾಗಿದೆ. ಪ್ರಯೋಗಗಳು ಮುಗಿದು, ಆರಂಭದಲ್ಲಿ ವೈದ್ಯರು ಮತ್ತು ಅಧ್ಯಾಪಕರಿಗೆ ಲಸಿಕೆ ನೀಡಲಾಗುವುದು ಎಂದು ರಷ್ಯಾ ಆರೋಗ್ಯ ಸಚಿವ ಮಿಖಾಯಲ್‌ ಮುರಶೊ ಅವರು ಹೇಳಿದ್ದಾರೆ.

Advertisement

ರಷ್ಯಾ ಸರಕಾರಿ ಸ್ವಾಮ್ಯದ ಸಂಶೋಧನ ಕೇಂದ್ರ ಪ್ರಯೋಗಗಳನ್ನು ಪೂರ್ಣಗೊಳಿಸಿದೆ. ಇದರ ಕಾಗದ ಪತ್ರಗಳು ಸಿದ್ಧಗೊಂಡಿದ್ದು, ನೋಂದಣಿಯಷ್ಟೇ ಬಾಕಿ ಇವೆ. ಗಾಮಲೆಯಾ ಇನ್‌ಸ್ಟಿಟ್ಯೂಟ್‌ ಇದನ್ನು ಸಿದ್ಧಪಡಿಸಿದ್ದು, ಅಕ್ಟೋಬರ್‌ ವೇಳೆಗೆ ಸಾಮೂಹಿಕ ಲಸಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಎಲ್ಲರಿಗೂ ಲಸಿಕೆ ತಲುಪುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಹೆಚ್ಚಿನ ಖಚಿತತೆಗಾಗಿ ಇನ್ನೂ ಒಂದೂವರೆ ತಿಂಗಳು ಲಸಿಕೆಯ ಪ್ರಯೋಗ ನಡೆಯಲಿದೆ ಎಂದೂ ಹೇಳಿದ್ದಾರೆ.

ಇದಕ್ಕೂ ಮೊದಲೇ ರಷ್ಯಾ ಆ.10 ಅಥವಾ 12ರ ಒಳಗಾಗಿ ಜಗತ್ತಿನ ಮೊದಲ ಕೋವಿಡ್‌ ಲಸಿಕೆಯ ಬಗ್ಗೆ ನೋಂದಣಿ ಮಾಡಿಕೊಳ್ಳುವುದಾಗಿ ಹೇಳಿಕೊಂಡಿತ್ತು.

ಒಂದೊಮ್ಮೆ ನೋಂದಣಿಯಾದರೆ ಏಳು ಅಥವಾ ಹತ್ತು ದಿನಗಳ ಒಳಗಾಗಿ ಲಸಿಕೆಯನ್ನು ಬಿಡುಗಡೆ ಮಾಡಲು ಮಾಸ್ಕೋದ ಗಾಮಲೆಯಾ ಇನ್‌ಸ್ಟಿಟ್ಯೂಟ್‌ಗೆ ಅನುಮತಿ ಸಿಗಲಿದೆ.

Advertisement

ಈ ಮೊದಲು ಮಾನವ ಪ್ರಯೋಗಗಳು ಸರಿಯಾಗಿ ಆಗಿಲ್ಲ ಎಂಬ ಆರೋಪವೂ ಈ ಲಸಿಕೆ ತಯಾರಕರ ಮೇಲಿತ್ತು. ಆದರೆ ಲಸಿಕೆ ಪ್ರಯೋಗ ಸರಿಯಾದ ಅಧ್ಯಯನ ವಿಧಾನಗಳನ್ವಯವೇ ಆಗಿದೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿತ್ತು. ಲಸಿಕೆಯಲ್ಲಿ ರಷ್ಯಾದ ಸರಕಾರವೂ ಹೂಡಿಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next