ಆದರೆ ರಷ್ಯಾ ಹಾಗೂ ಪಾಕಿಸ್ಥಾನಗಳಲ್ಲಿ ದಾಖಲೆ ಸಂಖ್ಯೆಯ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುತ್ತಲೇ ಇವೆ ಎಂದು ಎಂಎಸ್‌ಎನ್ ವರದಿ ಮಾಡಿದೆ.
Advertisement
9ಸಾವಿರಕ್ಕೂ ಹೆಚ್ಚು ರಷ್ಯಾದಲ್ಲಿ ಶನಿವಾರ ಒಂದೇ ದಿನ ಗರಿಷ್ಠ 10,633 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕು ಪ್ರಸರಣ ಮಟ್ಟ ಶೇ.20ರಷ್ಟು ಏರಿಕೆಯಾಗಿದೆ ಎನ್ನಲಾಗುತ್ತಿದೆ. ಪರಿಣಾಮ ಮಾಸ್ಕೋದ ಜನ ಆತಂಕಗೊಂಡಿದ್ದು, ನಗರದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಕಾಡುವ ಭೀತಿ ಎದುರಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದ್ದರೆ ಸೋಂಕಿತರ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ರಷ್ಯಾದಲ್ಲಿ ಒಟ್ಟು 1,34,687 ಪ್ರಕರಣಗಳು ವರದಿ ಆಗಿದ್ದು, ವಾಸ್ತವದಲ್ಲಿ ಅಂಕಿಅಂಶ
ಇನ್ನಷ್ಟು ಹೆಚ್ಚಿದೆ ಎನ್ನಲಾಗುತ್ತಿದೆ.
ಸ್ಪೇನ್‌ನಲ್ಲಿ ಸುಮಾರು 2,47,000 ಸಾವಿರ ಜನರಿಗೆ ಸೋಂಕು ತಗುಲಿ, 25 ಸಾವಿರ ಜನ ಮೃತಪಟ್ಟಿದ್ದರು. ಸದ್ಯ ವೈರಸ್ ನಿಯಂತ್ರಣಕ್ಕೆ ಬರುತ್ತಿರುವುದರಿಂದ ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದೆ. ಯುರೋಪ್ ಹಾಗೂ ಅಮೆರಿಕದ ಹಲವು ಭಾಗಗಳಲ್ಲಿ ಸೋಂಕು ನಿಯಂತ್ರಣಕ್ಕೆ ಪ್ರಯತ್ನ ಮುಂದುವರಿದಿದೆ. ಕೆಲವೆಡೆ ವ್ಯಾಪಾರ ವಹಿವಾಟುಗಳು ಮತ್ತೆ ಗರಿಗೆದರುತ್ತಿವೆ. 28 ಸಾವಿರಕ್ಕೂ ಅಧಿಕ ಕೊರೊನಾ ಸಾವು ಕಂಡ ಇಟಲಿಗೆ ಇನ್ನೂ ಸಂಪೂರ್ಣ ಬಿಡುಗಡೆ ಸಿಕ್ಕಿದಂತಿಲ್ಲ. 6,800 ಕ್ಕೂ ಅಧಿಕ ಸಾವುಗಳನ್ನು ಕಂಡ ಜರ್ಮನಿಯಲ್ಲಿ ಸಂಪೂರ್ಣ ಲಾಕ್‌ಡೌನ್‌ವಿಧಿಸಲಾಗಿರಲಿಲ್ಲ.