Advertisement

ಶಸ್ತ್ರತ್ಯಾಗ ಮಾಡಿದರೆ ಉಕ್ರೇನ್ ಜೊತೆ ಮಾತುಕತೆಗೆ ಸಿದ್ದವೆಂದ ರಷ್ಯಾ

08:41 AM Feb 26, 2022 | Team Udayavani |

ಮಾಸ್ಕೋ: ಉಕ್ರೇನ್‌ ಜೊತೆ ಮಾತುಕತೆ ನಡೆಸಲು ಬೆಲಾರಸ್‌ ನ ರಾಜಧಾನಿ ಮಿನ್‌ಸ್ಕ್‌ಗೆ ನಿಯೋಗವನ್ನು ಕಳುಹಿಸಲು ಸಿದ್ಧವಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ.

Advertisement

ಉಕ್ರೇನ್‌ ನಲ್ಲಿ ಪ್ರಜಾತಂತ್ರವನ್ನು ರಕ್ಷಿಸುವುದು ರಷ್ಯಾ ಆಕ್ರಮಣದ ಉದ್ದೇಶ ಎಂದಿರುವ ಪೆಸ್ಕೋವ್, ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಸರ್ಕಾರದ ಪ್ರತಿನಿಧಿಗಳು ನಿಯೋಗದಲ್ಲಿ ಇರಲಿದ್ದಾರೆಂದು ಹೇಳಿದ್ದಾರೆ.

ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಷ್ಯಾದೊಂದಿಗೆ ಮಾತುಕತೆ ನಡೆಸಲು ಬಯಸುತ್ತಿರುವುದಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಭಾಷಣದಲ್ಲಿ ಶುಕ್ರವಾರ ಹೇಳಿದ್ದರು. ಈ ಸಂಬಂಧ ವ್ಲಾಡಿಮಿರ್ ಪುಟಿನ್, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ:ನಮ್ಮ ಮೆಟ್ರೋ: ಆಗಮನ, ನಿರ್ಗಮನಕ್ಕೆ ಒಂದೇ ಪ್ಲಾಟ್‌ಫಾರಂ!

ಉಕ್ರೇನ್ ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ತಮ್ಮ ದೇಶ ಹೊಂದಿಲ್ಲ. ಉಕ್ರೇನ್ ಪಡೆಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ನೇರವಾಗಿ ಮಾತುಕತೆ ನಡೆಸಲು ಮಾಸ್ಕೋ ಸಿದ್ಧವಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್‌ ಹೇಳಿದ್ದರು.

Advertisement

ಉಕ್ರೇನ್ ರಾಜಧಾನಿ ಕೀವ್‌ ರಷ್ಯಾ ಪಡೆಗಳು ಸುತ್ತುವರಿದಿವೆ. ಇತರ ನಗರಗಳ ಮೇಲೂ ಕಾರ್ಯಾಚರಣೆ ಮುಂದುವರಿಸಲಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಐಗರ್ ಕೊನಾಶೆಂಕೊವ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next