ಮಾಸ್ಕೋ: ರಷ್ಯಾ ಭಾರತದ ಸದಾಕಾಲದ ಸ್ನೇಹಿತ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಾಸ್ಕೋದಲ್ಲಿ ಮಂಗಳವಾರ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧ್ಯಕ್ಷ ಪುತಿನ್‌ರನ್ನು ಮುಕ್ತ ಕಂಠದಿಂದ ಶ್ಲಾ ಸಿದ್ದಾರೆ.
ಭಾರತದ ಅತ್ಯಂತ ಕಷ್ಟ ಮತ್ತು ಸುಖದ ವೇಳೆಯಲ್ಲಿ ರಷ್ಯಾ ನೆರವಾಗಿದೆ. ಪುತಿನ್ 2 ದೇಶಗಳ ಬಾಂಧವ್ಯ ವನ್ನು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ 10 ವರ್ಷಗಳಲ್ಲಿ ಭಾರತದಲ್ಲಿ ಉಂಟಾಗಿರುವ ಬದಲಾವಣೆ, ಅಭಿವೃದ್ಧಿ ಜಗತ್ತನ್ನೇ ಬೆರಗುಗೊಳಿಸಿದೆ. 140 ಕೋಟಿ ಭಾರತೀಯರು ವಿಕಸಿತ ಭಾರತದ ಕನಸನ್ನು ನನಸಾಗಿಸುವತ್ತ ಹೆಜ್ಜೆಯಿಟ್ಟಿದ್ದಾರೆ. ಇಂದಿನ ಭಾರತ ಆತ್ಮವಿಶ್ವಾಸದ ಭಾರತ. ಅದುವೇ ನಮ್ಮ ಬಂಡವಾಳ ಎಂದ ಮೋದಿ, ಎಲ್ಲ ಸವಾಲುಗಳಿಗೂ ಸವಾಲೊಡ್ಡುವುದು ನನ್ನ ಡಿಎನ್‌ಎಯಲ್ಲೇ ಬಂದಿದೆ ಎಂದಿದ್ದಾರೆ.
ರಷ್ಯಾದಲ್ಲಿ ಮತ್ತೆರಡು ದೂತಾವಾಸ ಕಚೇರಿ: ರಷ್ಯಾದ ಕಜಾನ್, ಯಕಟೆರಿನ್‌ಬರ್ಗ್ ನಗರಗಳಲ್ಲಿ ದೂತಾ ವಾಸ ಕಚೇರಿ ಆರಂಭಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಈಗಾಗಲೇ ಭಾರತವು ರಷ್ಯಾದ ಸೈಂಟ್ ಪೀಟರ್ಸ್‌ಬರ್ಗ್ ಮತ್ತು ವ್ಲಾಡಿವೋಸ್ಟೋಕ್‌ನಲ್ಲಿ 2 ಕಾನ್ಸುಲೇಟ್‌ಗಳನ್ನು ಹೊಂದಿದೆ.
“ಫಿರ್ ಬಿ ದಿಲ್ ಹೈ ಹಿಂದೂಸ್ಥಾನಿ’… ರಾಜ್‌ಕಪೂರ್ ಹಾಡು ಉಲ್ಲೇಖೀಸಿದ ಪ್ರಧಾನಿ
ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ವನ್ನು ಬಣ್ಣಿಸುವ ವೇಳೆ ಮೋದಿ ಅವರು ರಾಜ್‌ಕಪೂರ್ 1955ರಲ್ಲಿ ನಟಿಸಿದ್ದ “ಶ್ರೀ420′ ಸಿನೆಮಾದ “ಫಿರ್ ಬಿ ದಿಲ್ ಹೈ ಹಿಂದೂಸ್ಥಾನಿ’ ಹಾಡು ಉಲ್ಲೇಖೀಸಿದ್ದಾರೆ. ಸಿನೆಮಾ ನಟರಾಗಿರುವ ರಾಜ್‌ಕಪೂರ್, ಮಿಥುನ್ ಚಕ್ರವರ್ತಿ ಮೊದಲಾದವರೂ ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ವರ್ಷದಿಂದ ವರ್ಷಕ್ಕೆ ದೃಢಪಡಿಸುವಲ್ಲಿ ನೆರವಾಗಿದ್ದಾರೆ ಎಂದು ಹೇಳಿದ್ದಾರೆ.