Advertisement

Russia; ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವು:ಕೇಂದ್ರ

01:02 AM Mar 09, 2024 | Team Udayavani |

ಹೊಸದಿಲ್ಲಿ: ಉದ್ಯೋಗದ ಆಮಿಷಕ್ಕೆ ಒಳಗಾಗಿ ರಷ್ಯಾದಲ್ಲಿ ಸಿಕ್ಕಿ ಹಾಕಿಕೊಂಡಿ ರುವ ಕರ್ನಾಟಕ ಸೇರಿ ದೇಶದ ಹಲವು ಯುವಕರನ್ನು ರಕ್ಷಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌ 20 ಮಂದಿ ನೆರವಿಗಾಗಿ ಸರಕಾರವನ್ನು ಸಂಪರ್ಕಿಸಿದ್ದಾರೆ. ಅವರನ್ನು ರಕ್ಷಿಸಲಾ­ಗುತ್ತದೆ ಎಂದು ಹೇಳಿದ್ದಾರೆ.

Advertisement

ಉಕ್ರೇನ್‌ ಜತೆಗಿನ ಯುದ್ಧದಲ್ಲಿ ಹೈದರಾ­ಬಾದ್‌ನ ಮೊಹಮ್ಮದ್‌ ಅಶ್ಫಾನ್‌ ಅಸುನೀಗಿರುವ ಬೆನ್ನಲ್ಲಿಯೇ ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ ಉದ್ಯೋಗದ ಆಮಿಷವೊಡ್ಡಿ ಜನ­ರನ್ನು ಸೆಳೆಯುತ್ತಿರುವ ಏಜೆಂಟ್‌ಗಳ ಮೇಲೆ ಗಮನ ಇರಿಸಲಾಗಿದೆ. ರಷ್ಯಾ­ದಲ್ಲಿ ಸಿಲುಕಿಕೊಂಡಿರುವವರ ಬಗ್ಗೆ ಈಗಾಗಲೇ ಅಲ್ಲಿನ ಭಾರತೀಯ ರಾಯ­ಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ವಿದೇ­ಶಾಂಗ ಸಚಿವಾಲಯದ ವಕ್ತಾರ ಹೇಳಿದ್ದಾರೆ.

ರಷ್ಯಾದ ಇಬ್ಬರ ಮೇಲೆ ಸಿಬಿಐ ಕಣ್ಣು: ಉದ್ಯೋಗದ ಆಮಿಷವೊಡ್ಡಿ ಭಾರತೀ­ಯರನ್ನು ಯುದ್ಧದಲ್ಲಿ ತೊಡಗಿ­ಸುತ್ತಿ ರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಷ್ಯಾದಲ್ಲಿನ ಇಬ್ಬರು ಕಳ್ಳಸಾಗಣೆ ದಾರರ ಮೇಲೆ ಸಿಬಿಐ ಕಣ್ಣಿಟ್ಟಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next