ಕೀವ್: ಉಕ್ರೇನ್‌ನ ಲುವ್ಯೂನಲ್ಲಿ ಸೋಮವಾರ ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಗೆ ಏಳು ನಾಗರಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಎಂಟು ಜನರಿಗೆ ಗಾಯಗಳಾಗಿವೆ.
ನಾಗರಿಕರು ವಾಸ್ತವ್ಯ ಹೂಡಿರುವ ಕಟ್ಟಡಗಳ ಮೇಲೆ ನಡೆಸಲಾದ ದಾಳಿಗಳಲ್ಲಿ ಗಾಯಗೊಂಡವರಲ್ಲಿ ಪುಟ್ಟ ಮಗುವೊಂದು ಸೇರಿದ್ದು ಅವರೆಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ರಷ್ಯಾ ಪಡೆಗಳಿಂದ ಉಕ್ರೇನ್ ಸೇನೆಗೆ ಸಂಬಂಧಿಸಿದ ಮೂರು ಕಟ್ಟಡಗಳು, ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದ್ದ ಸ್ಥಳೀಯ ಹೊಟೇಲ್‌ನ ಮೇಲೂ ದಾಳಿ ನಡೆಸಲಾಗಿದೆ.
ಇದನ್ನೂ ಓದಿ:ಛತ್ತೀಸ್‌ಗಢ: ನಕ್ಸಲರ ದಾಳಿಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಾಯ
ರಷ್ಯಾಕ್ಕೆ ಆರ್ಥಿಕ ಸಂಕಷ್ಟ: ಐರೋಪ್ಯ ರಾಷ್ಟ್ರಗಳು, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ಹೇರಿರುವ ಆರ್ಥಿಕ ದಿಗ್ಬಂಧನದಿಂದಾಗಿ ರಷ್ಯಾವು 1994ರ ಅನಂತರ ಕಂಡ ತೀವ್ರ ತೆರನಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಖುದ್ದು ರಷ್ಯಾವೇ ಹೇಳಿದೆ. ಖರ್ಚು ವೆಚ್ಚ ಹೊಂದಾಣಿಕೆಗಾಗಿ ಬ್ಯಾಂಕುಗಳ ಠೇವಣಿ ಮೇಲಿನ ಬಡ್ಡಿ ದರ ಇಳಿಸುವುದಾಗಿ ಹೇಳಿದೆ.
ಸಹಾಯ ಘೋಷಣೆ ನಿರೀಕ್ಷೆ : ಉಕ್ರೇನ್‌ನ ಮರುನಿರ್ಮಾಣಕ್ಕಾಗಿ ಹಾಗೂ ಅಲ್ಲಿನ ಜನರಿಗೆ ಮೂಲಸೌಕರ್ಯ ಗಳನ್ನು ಕಲ್ಪಿಸಲಿಕ್ಕಾಗಿ ವಿಶ್ವಸಂಸ್ಥೆಯ “ಮಲ್ಟಿ ಡೋನರ್ ನಿಧಿ’ಯಿಂದ ಉಕ್ರೇನ್‌ಗೆ ದೇಣಿಗೆ ನೀಡುವ ಸಂಬಂಧ ಶೀಘ್ರವೇ ಘೋಷಣೆ ಮಾಡಲಾಗುತ್ತದೆ ಎಂದಿದೆ ವಿಶ್ವಸಂಸ್ಥೆ.