Advertisement

ಪುಟಿನ್‌ ಮತ್ತೆ ಅಧ್ಯಕ್ಷ: 4ನೇ ಬಾರಿಗೆ ರಷ್ಯಾ ಅಧಿಕಾರ ಚುಕ್ಕಾಣಿ

07:30 AM Mar 20, 2018 | Team Udayavani |

ಮಾಸ್ಕೋ: ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವ್ಲಾಡಿಮಿರ್‌ ಪುಟಿನ್‌ ಪುನಃ 6 ವರ್ಷಗಳವರೆಗೆ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಆದರೆ ಪಾಶ್ಚಿಮಾತ್ಯ ದೇಶಗಳ ಜತೆಗಿನ ರಷ್ಯಾ ಸಂಬಂಧ ಹಳಸಿದ್ದರಿಂದಾಗಿ, ಕೆಲವೇ ದೇಶಗಳು ಪುಟಿನ್‌ಗೆ ಶುಭಾಶಯ ಕೋರಿದ್ದು ಗಮನಾರ್ಹವಾಗಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಅವರಿಗೆ ಶುಭಾಶಯ ಕೋರಿ ಟ್ವೀಟ್‌ ಮಾಡಿದ್ದಾರೆ. 

Advertisement

ಎರಡು ದಶಕಗಳವರೆಗೆ ರಷ್ಯಾವನ್ನು ಆಳಿದ ಪುಟಿನ್‌, ಈ ಬಾರಿ ಶೇ. ಶೇ. 67ರಷ್ಟು ಮತ ಪಡೆದಿದ್ದಾರೆ. 2024ರ ವರೆಗೆ ಅಧ್ಯಕ್ಷ ಸ್ಥಾನದಲ್ಲಿರುವ ಪುಟಿನ್‌, ಸ್ಟಾಲಿನ್‌ ನಂತರದಲ್ಲಿ ಅತ್ಯಂತ ಹೆಚ್ಚು ಅವಧಿಗೆ ಅಧಿಕಾರದಲ್ಲಿರುವ ಏಕೈಕ ನಾಯಕ ಅವರಾಗಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಶೇ. 76.66ರಷ್ಟು ದಾಖಲೆಯ ಮತದಾನವಾಗಿದ್ದು, ಪುಟಿನ್‌ ಪರವಾಗಿ ಮತದಾನವಾಗಿದೆ. ಇದು ನಿರೀಕ್ಷೆಗಿಂತ ಶೇ. 80ರಿಂದ 10ರಷ್ಟು ಹೆಚ್ಚಿನದಾಗಿತು. 2014ರಲ್ಲಿ ಉಕ್ರೇನ್‌ನಿಂದ ವಶಪಡಿಸಿಕೊಂಡ ಕ್ರಿಮಿಯಾದಲ್ಲಿ ಶೇ. 92ರಷ್ಟು ಮತಗಳನ್ನು ಪುಟಿನ್‌ ಪಡೆದಿದ್ದಾರೆ.  ಮತದಾನದಲ್ಲಿ ಅಕ್ರಮ ನಡೆಸಿರುವ ಆರೋಪವನ್ನು ಪ್ರತಿಪಕ್ಷಗಳು ಮಾಡಿವೆ.  ಕ್ರೆಮ್ಲಿನ್‌ನಲ್ಲಿ ಪುಟಿನ್‌ ಪರವಾಗಿ ಭಾರಿ ಸಂಖ್ಯೆಯಲ್ಲಿ ಮತದಾನವಾಗಿದ್ದು, ಈ ಆರೋಪಗಳಿಗೆ ಕಾರಣವಾಗಿದೆ.ಈ ಬಾರಿ ಚುನಾವಣೆಯಲ್ಲಿ ಪುಟಿನ್‌ಗೆ ಏಳು ಜನರು ಪ್ರತಿಸ್ಪರ್ಧಿಗಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next