Advertisement

ಮೆಟ್ರೋ ಸ್ಫೋಟದ ಹಿಂದೆ ಶಂಕಿತ ಆತ್ಮಾಹುತಿ ಬಾಂಬರ್‌: ರಶ್ಯ ದೃಢೀಕರಣ

04:49 PM Apr 04, 2017 | udayavani editorial |

ಮಾಸ್ಕೋ : ನಿನ್ನೆ ಸೋಮವಾರ 14 ಜನರ ಸಾವಿಗೆ ಹಾಗೂ 50 ಜನರು ಗಾಯಗೊಳ್ಳಲು ಕಾರಣವಾದ ಸೈಂಟ್‌ ಪೀಟರ್‌ಸ್‌ಬರ್ಗ್‌ ಮೆಟ್ರೋ ಸ್ಫೋಟದ ಹಿಂದೆ ಆತ್ಮಾಹುತಿ ಬಾಂಬರ್‌ ಇರುವುದನ್ನು ತಾನು ಶಂಕಿಸಿರುವುದಾಗಿ ರಶ್ಯದ ತನಿಖಾ ಸಮಿತಿ ಹೇಳಿದೆ.

Advertisement

ರೈಲಿನ ಮೂರನೇ ಬೋಗಿಯಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಆತ್ಮಾಹುತಿ ಬಾಂಬರ್‌ನ ದೇಹದ ತುಂಡುಗಳು ಪತ್ತೆಯಾಗಿವೆ. ಸ್ಫೋಟದ ಹಿಂದೆ ಆತ್ಮಾಹುತಿ ಬಾಂಬರ್‌ ಇರುವುದನ್ನು ಇದು ಖಚಿತಪಡಿಸುತ್ತದೆ. ಆದರೆ ಗಣಿಸಲಾಗಿರುವ ಮೃತದೇಹಗಳ ಪೈಕಿ ಈತನ ಶವವೂ ಸೇರಿರಬಹುದೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next