Advertisement

ದಿಗ್ಬಂಧನದ ಸುಳಿ; ರಷ್ಯಾ ನಂ.1 ; ಇರಾನ್‌, ಉತ್ತರ ಕೊರಿಯಾವನ್ನು ಹಿಂದಿಕ್ಕಿದ ಪುತಿನ್‌

01:37 AM Mar 09, 2022 | Team Udayavani |

ಉಕ್ರೇನ್‌ ವಿರುದ್ಧ ಆಕ್ರಮಣಗೈದ 12 ದಿನಗಳಲ್ಲೇ ರಷ್ಯಾವು ಇರಾನ್‌ ಮತ್ತು ಉತ್ತರ ಕೊರಿಯಾವನ್ನು ಹಿಂದಿಕ್ಕಿ, ಜಗತ್ತಿನಲ್ಲೇ ಅತೀ ಹೆಚ್ಚು ದಿಗ್ಬಂಧನಗಳಿಗೆ ಗುರಿಯಾದ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ಆರ್ಥಿಕ ನಿರ್ಬಂಧಗಳ ಬಳಿಕ ಹೊಸದಾಗಿ 2,778 ಹೊಸ ದಿಗ್ಬಂಧನಗಳು ರಷ್ಯಾವನ್ನು ಕಟ್ಟಿಹಾಕಿದೆ. ಹೀಗಾಗಿ ಒಟ್ಟು ದಿಗ್ಬಂಧನಗಳ ಸಂಖ್ಯೆ 5,530ಕ್ಕೇರಿದೆ.

Advertisement

ಇದು ಆರ್ಥಿಕ ಅಣ್ವಸ್ತ್ರದ ಯುದ್ಧ ಹಾಗೂ ಇತಿ ಹಾಸದಲ್ಲೇ ಅತೀ ಹೆಚ್ಚಿನ ಆರ್ಥಿಕ ದಿಗ್ಬಂಧನದ ಸಮರ. ಕೇವಲ 2 ವಾರಗಳಲ್ಲಿ ರಷ್ಯಾ ಜಾಗತಿಕನಿರ್ಬಂಧದ ಅತೀ ದೊಡ್ಡ ಟಾರ್ಗೆಟ್‌ ಆಗಿ ಬದಲಾಯಿತು.ಪೀಟರ್‌ ಪಿಯಾಟೆಸ್ಕಿ, ಅಮೆರಿಕದ ಖಜಾನೆ ಇಲಾಖೆ ಮಾಜಿ ಅಧಿಕಾರಿ

ನಿರ್ಬಂಧ ಎದುರಿಸಿದ ರಾಷ್ಟ್ರಗಳು
ಅಣ್ವಸ್ತ್ರ ಯೋಜನೆಗಳು ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಇರಾನ್‌ಗೆ ಈ ಹಿಂದೆಯೇ ನಿರ್ಬಂಧಗಳನ್ನು ವಿಧಿಸಲಾಗಿದೆ. ರಷ್ಯಾ, ಇರಾನ್‌ ಮಾತ್ರವಲ್ಲದೇ ಅತೀ ಹೆಚ್ಚು ನಿರ್ಬಂಧಕ್ಕೊಳಗಾದ ಇತರೆ ದೇಶಗಳೆಂದರೆ ಉತ್ತರ ಕೊರಿಯಾ, ವೆನಿಜುವೆಲಾ, ಮ್ಯಾನ್ಮಾರ್‌ ಮತ್ತು ಕ್ಯೂಬಾ.

ಯುದ್ಧಕ್ಕೂ ಮೊದಲ ನಿರ್ಬಂಧ
ಉಕ್ರೇನ್‌ ಮೇಲೆ ಯುದ್ಧ ಸಾರು ವುದಕ್ಕೂ ಮೊದಲೇ ರಷ್ಯಾದ ವಿರುದ್ಧ ಅಮೆರಿಕವು ಕೆಲವು ನಿರ್ಬಂಧಗಳನ್ನು ಹೇರಿತ್ತು. 2016ರ ಅಧ್ಯಕ್ಷೀಯ ಚುನಾವಣೆ ಯಲ್ಲಿ ಹಸ್ತಕ್ಷೇಪ, ರಷ್ಯಾದಲ್ಲಿ ರಾಜಕೀಯ ಭಿನ್ನಮತೀಯರ ವಿರುದ್ಧ ದಾಳಿ ಮತ್ತಿತರ ಕಾರಣಗಳಿಗಾಗಿ ಒಟ್ಟು 2,778 ನಿರ್ಬಂಧಗಳನ್ನು ಹೇರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next