ಜಿನೇವಾ: ಮುಂದಿನೆರಡು ಒಲಿಂಪಿಕ್ಸ್ ಪಂದ್ಯಾವಳಿಗಳಲ್ಲಿ ರಶ್ಯಕ್ಕೆ “ಕೋರ್ಟ್ ಆಫ್ ಆರ್ಬಿಟ್ರೇಶನ್’ ಬಲವಾದ ನಿಷೇಧ ಹೇರಿದೆ. ಈ ಸಂದರ್ಭದಲ್ಲಿ ಅದು ರಶ್ಯ ಹೆಸರು, ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಬಳಸುವಂತಿಲ್ಲ ಎಂದು ಸೂಚಿಸಿದೆ.
ಹಾಗೆಯೇ ಈ ಅವಧಿಯಲ್ಲಿ ಅದು ಯಾವುದೇ ವಿಶ್ವಮಟ್ಟದ ಕ್ರೀಡಾಕೂಟಕ್ಕೆ ಬಿಡ್ ಕೂಡ ಸಲ್ಲಿಸುವಂತಿಲ್ಲ ಎಂದು ತೀರ್ಪು ನೀಡಿದೆ.
ಆದರೆ ಯಾವುದೇ ಉದ್ದೀಪನ ಕಳಂಕ ಹೊತ್ತಿಲ್ಲದ ಇಲ್ಲಿನ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಧ್ವಜದಡಿ ಸ್ವತಂತ್ರವಾಗಿ ಸ್ಪರ್ಧಿಸಬಹುದಾಗಿದೆ. ಆಗ ಅವರು ತಟಸ್ಥ ಕ್ರೀಡಾಪಟುಗಳು/ತಟಸ್ಥ ತಂಡವಾಗಿರುತ್ತಾರೆ. ಹೀಗಾಗಿ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್, 2022ರ ಬೀಜಿಂಗ್ ವಿಂಟರ್ ಒಲಿಂಪಿಕ್ಸ್ ಮತ್ತು 2022ರ ಕತಾರ್ ಫಿಫಾ ವಿಶ್ವಕಪ್ ಕೂಟದಲ್ಲಿ ರಶ್ಯ ಹೆಸರು ಕಾಣಿಸದು.
ಇದನ್ನೂ ಓದಿ:ಬಾಲಂಗೋಚಿಗಳ ಪೆವಿಲಿಯನ್ ಪರೇಡ್: ದಿನದ ಆರಂಭದಲ್ಲೇ ಟೀಂ ಇಂಡಿಯಾ ಆಲ್ ಔಟ್
2014ರ ಸೋಚಿ ವಿಂಟರ್ ಒಲಿಂಪಿಕ್ಸ್ ಬಳಿಕ ರಶ್ಯದ ಗರಿಷ್ಠ ಪ್ರಮಾಣದ ಕ್ರೀಡಾಪಟುಗಳು ಉದ್ದೀಪನ ಸೇವಿಸಿದರೂ ಇದನ್ನು ನಿಯಂತ್ರಿಸಲು ಅಲ್ಲಿನ ಆ್ಯಂಟಿ ಡೋಪಿಂಗ್ ಏಜೆನ್ಸಿ “ರುಸಾಡ’ ವಿಫಲವಾದ್ದರಿಂದ “ವಾಡಾ’ ಕಾರ್ಯಾಚರಣೆಗೆ ಇಳಿದಿತ್ತು. ಇದರ ಪರಿಣಾಮವೇ ಈ ನಿಷೇಧ.