Advertisement

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

11:02 PM Nov 28, 2024 | Team Udayavani |

ಕೀವ್‌: ಉಕ್ರೇನ್‌ನ ವಿದ್ಯುತ್‌ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ರಷ್ಯಾ, ಗುರುವಾರ ಅಂದಾಜು 200 ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಿದೆ. ಪರಿಣಾಮ 10 ಲಕ್ಷಕ್ಕೂ ಅಧಿಕ ಮನೆಗಳು ಅಂಧಾಕಾರದಲ್ಲಿ ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2 ವಾರದಲ್ಲೇ ಇದು ರಷ್ಯಾ ನಡೆಸಿದ 2ನೇ ಅತಿ ದೊಡ್ಡ ದಾಳಿಯಾಗಿದೆ. ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ದಾಳಿಯ ಮಾಹಿತಿಯನ್ನು ಸಚಿವ ಹರ್ಮನ್‌ ಹಲುಶ್ಚೆಂಕೊ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

Advertisement

ಉಕ್ರೇನ್‌ನ ಸೇನಾ ನೆಲೆಗಳು ಮತ್ತು ಅದರ ಬೆಂಬಲ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ರಷ್ಯಾ 100 ಡ್ರೋನ್‌ ಮತ್ತು 90 ಕ್ಷಿಪಣಿಗಳೊಂದಿಗೆ ದಾಳಿ ನಡೆಸಿದೆ. ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಈ ವರ್ಷ ನಡೆಸಿದ 11ನೇ ದಾಳಿ ಇದಾಗಿದೆ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. ಆದರೆ, ಉಕ್ರೇನ್‌ ವಾಯು ಪಡೆಯು 76 ಕ್ರೂಸ್‌ ಕ್ಷಿಪಣಿಗಳನ್ನು ಮತ್ತು 32 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next