ಕೀವ್: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಮುಂದುವರಿದಿದ್ದು, ಸೋಮವಾರ ಬೆಳಗಿನ ಜಾವ ಪುಟಿನ್ ಪಡೆ ಸುಮಿ ನಗರದ ರಾಸಾಯನಿಕ ಸ್ಥಾವರದ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಸುಮಿಖಿಂಪ್ರೋಮ್ ಕೆಮಿಕಲ್ ಪ್ಲ್ರಾಂಟ್ ಮೇಲೆ ದಾಳಿಯಾದ ಬೆನ್ನಲ್ಲೇ ಸ್ಥಾವರದಲ್ಲಿ ಅಮೋನಿಯಾ ಸೋರಿಕೆ ಆರಂಭವಾಗಿದೆ. ಸುಮಿ ನಗರದ ಗವರ್ನರ್ ಒಬ್ಲಾಸ್ಟ್ ಮಿಟ್ರೋ ಝಿವಿಸ್ಕಿ ಅವರೇ ಈ ವಿಚಾರವನ್ನು ದೃಢಪಡಿಸಿದ್ದಾರೆ.
ರಾಸಾಯನಿಕ ಸೋರಿಕೆಯಿಂದಾಗಿ ಸ್ಥಾವರದ ಸುತ್ತಮುತ್ತಲಿನ ಸುಮಾರು 2.5 ಕಿ. ಮೀ. ವ್ಯಾಪ್ತಿಯಲ್ಲಿ ವಿಷಪೂರಿತ ಅನಿಲ ಹರಡಲಾರಂಭಿಸಿದೆ. ಸದ್ಯಕ್ಕೆ ಸುಮಿ ನಗರಕ್ಕೆ ಯಾವುದೇ ಅಪಾಯವಿಲ್ಲ. ಆದರೆ, ನೋವೋಸೆಲಿಸ್ಯಾ ಮತ್ತು ವಖ್ಯಾì ಎಂಬ ಎರಡು ಗ್ರಾಮಗಳಲ್ಲಿ ವಿಷಪೂರಿತ ಅನಿಲ ಹಬ್ಬಿದ್ದು, ನಾಗರಿಕರಿಗೆ ಕೂಡಲೇ ಭೂಗತ ಆಶ್ರಯತಾಣಗಳಿಗೆ ಶಿಫ್ಟ್ ಆಗುವಂತೆ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ನಿಯಮ 69 ರ ಚರ್ಚೆಗೆ ಸಮಯವೇಕಿಲ್ಲ? :ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಆಕ್ಷೇಪ
ಅಮೋನಿಯಾ ಪತ್ತೆಯಾದಲ್ಲಿ ಶವರ್‌ಗಳನ್ನು ಆನ್ ಮಾಡಿ, ಅದಕ್ಕೆ ಉತ್ತಮ ಸ್ಪ್ರೆಯನ್ನು ಹಾಕಿಕೊಳ್ಳಿ. ಬ್ಯಾಂಡೇಜ್ ಅನ್ನು ಒದ್ದೆ ಮಾಡಿ(ಶೇ.5ರಷ್ಟು ಅಸಿಟಿಕ್ ಅಥವಾ ಸಿಟ್ರಿಕ್ ಆಮ್ಲದ ದ್ರಾವಣದಿಂದ ತೇವಗೊಳಿಸಿ), ಅದರ ಮೂಲಕ ಉಸಿರಾಡಿ ಎಂದು ನಾಗರಿಕರಿಗೆ ಸೂಚಿಸಲಾಗಿದೆ.
ವೈಮಾನಿಕ ದಾಳಿಯಿಂದ 50 ಟನ್‌ನ ಅಮೋನಿಯಾ ಟ್ಯಾಂಕ್‌ಗೆ ಹಾನಿಯಾಗಿದೆ. ಪ್ರಸಕ್ತ ತಿಂಗಳ ಆರಂಭದಲ್ಲಿ ಉಕ್ರೇನ್‌ನ ಝೆಪೋರ್‌ಝಿಯಾ ಅಣು ಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿತ್ತು.