Advertisement

ಉಗ್ರ ಪಟ್ಟಿಗೆ ಎಫ್ ಬಿ, ಮೆಟಾ; ಜುಕರ್‌ಬರ್ಗ್‌ಗೆ 11 ಕೋಟಿ ಪಾಲೋವರ್ಸ್‌ ನಷ್ಟ

11:18 AM Oct 13, 2022 | Team Udayavani |

ಮಾಸ್ಕೊ: ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಮ್ ನ ಮಾತೃಸಂಸ್ಥೆ ಮೆಟಾ ಸಂಸ್ಥೆಯನ್ನು ರಷ್ಯಾ “ಉಗ್ರಗಾಮಿ ಮತ್ತು ಭಯೋತ್ಪಾದಕ ಸಂಘಟನೆ’ಗಳ ಪಟ್ಟಿಗೆ ಸೇರಿಸಿದೆ. ಇದನ್ನು ಫೆಡರಲ್‌ ಸರ್ವಿಸ್‌ ಫಾರ್‌ ಫೈನಾನ್ಶಿಯಲ್‌ ಮಾನಿಟರಿಂಗ್‌ ದೃಢಪಡಿಸಿದೆ.

Advertisement

ಈ ವರ್ಷದ ಆರಂಭದಲ್ಲಿ ರಷ್ಯಾದ ನ್ಯಾಯಾಲಯು, ಮೆಟಾ ಸಂಸ್ಥೆಯನ್ನು ಉಗ್ರಗಾಮಿ ಸಂಸ್ಥೆ ಎಂದು ಗುರುತಿಸಿ, ರಷ್ಯಾದಲ್ಲಿ ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಮ್ ಅನ್ನು ಬ್ಯಾನ್‌ ಮಾಡಿತು.

ಫೆ.24ರಂದು ಉಕ್ರೇನ್‌ ವಿರುದ್ಧ ದಾಳಿ ಆರಂಭಿಸುತ್ತಿದ್ದಂತೆಯೇ ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಮ್ ಅನ್ನು ನಿರ್ಬಂಧಿಸಲಾಯಿತು. ಜುಕರ್‌ಬರ್ಗ್‌ ಹಲವು ಉನ್ನತ ವ್ಯಕ್ತಿಗಳೊಂದಿಗೆ ಸೇರಿಕೊಂಡು ರಷ್ಯಾ ವಿರುದ್ಧದ ಅಜೆಂಡಾ ಪ್ರಚುರಪಡಿಸುತ್ತಿದ್ದಾರೆ ಎಂದು ರಷ್ಯಾ ಆರೋಪಿಸಿದೆ.

ಏಪ್ರಿಲ್‌ನಲ್ಲಿ ರಷ್ಯಾ ಪ್ರವೇಶಸಿದಂತೆ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೆ ರಷ್ಯಾ ವಿದೇಶಾಂಗ ಸಚಿವಾಲಯ ನಿರ್ಬಂಧ ವಿಧಿಸಿತ್ತು.

ಜುಕರ್‌ಬರ್ಗ್‌ಗೆ 11 ಕೋಟಿ
ಪಾಲೋವರ್ಸ್‌ ನಷ್ಟ !
ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಏಕಾಏಕಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ 11.9 ಕೋಟಿಗೂ ಹೆಚ್ಚು ಫಾಲೋವರ್ಗಳನ್ನು ಕಳೆದುಕೊಂಡಿದ್ದಾರೆ. ಕೇವಲ ಜುಕರ್‌ಬರ್ಗ್‌ ಮಾತ್ರವಲ್ಲದೇ ಅನೇಕರು ತಮ್ಮ ಫೇಸ್‌ಬುಕ್‌ ಖಾತೆಗಳಲ್ಲಿ ಫಾಲೋವರ್ಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿರುವುದನ್ನು ಗಮನಿಸಿದ್ದು, ಈ ಬಗ್ಗೆ ಫೇಸ್‌ಬುಕ್‌ಗೆ ದೂರು ನೀಡಿದ್ದಾರೆ.

Advertisement

“ನನ್ನ ಫೇಸ್‌ಬುಕ್‌ ಖಾತೆಯಲ್ಲಿ ಏಕಾಏಕಿ ಸುಮಾರು 9 ಲಕ್ಷ ಫಾಲೋವರ್ಗಳು ಮಾಯವಾಗಿದ್ದಾರೆ. ಇದರಿಂದ ನನ್ನ ಖಾತೆಯಲ್ಲಿ ಕೇವಲ 9,000 ಫಾಲೋವರ್ಗಳು ಉಳಿದಿದ್ದಾರೆ,’ ಎಂದು ಲೇಖಕಿ ತಸ್ಲಿಮಾ ನಸ್ರಿàನ್‌ ಟ್ವೀಟ್‌ ಮಾಡಿದ್ದಾರೆ.

“ಕೆಲವರ ಫೇಸ್‌ಬುಕ್‌ ಖಾತೆಗಳಲ್ಲಿ ಫಾಲೋವರ್ಗಳ ಸಂಖ್ಯೆಯಲ್ಲಿ ಅಸಮಂಜಸವಾದ ಏರಿಳಿತ ಕಾಣುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಈ ಬಗ್ಗೆ ಕ್ಷಮೆ ಕೋರುತ್ತೇವೆ ‘ ಎಂದು ಫೇಸುಬುಕ್‌ ವಕ್ತಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next