Advertisement
ಸಂತೋಷ ಸರನಾಡಗೌಡರ ತೋಟದಲ್ಲಿ ಹೆಬ್ಬೇವು ಕಟಾವು ಮಾಡುತ್ತಿದ್ದ ಸಂದರ್ಭ ಮರದ ದಿಮ್ಮಿಯ ಅಡಿಯಲ್ಲಿ ಕನ್ನಡಿ ಹಾವು ಕಂಡು ಬಂದಿದೆ. ಕೂಡಲೇ ಸಂತೋಷ್ ಪಿವಿಸಿ ಪೈಪ್ ಮೂಲಕ ಹಾವನ್ನು ಸುರಕ್ಷಿತವಾಗಿ ಹಿಡಿದು ಟ್ರಾಕ್ಟರ್ ಟ್ರಾಲಿಯಲ್ಲಿ ಹಾಕಿ ಮಕ್ಕಳಿಗೆ ಹಾಗೂ ಮನೆಯವರಿಗೆ ಈ ಹಾವನ್ನು ತೋರಿಸಿ ಬಳಿಕ ಹಾವನ್ನು ದೂರದ ಗುಡ್ಡದ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.
Related Articles
Advertisement
ಕೊಳಕು ಮಂಡಲ,ಕೆರೆ ಹಾವು ನಾಗರಹಾವು, ಹಸಿರು ಹಾವು, ಹೆಬ್ಬಾವು ಹಾವುಗಳು ಈ ಪ್ರದೇಶದಲ್ಲಿ ಕಂಡು ಬರುತ್ತಿವೆ ಅವುಗಳ ಪಾಡಿಗೆ ಬಿಡುತ್ತಿದ್ದು ಹಾವುಗಳಿಗೆ ತೊಂದರೆ ಕೊಡುವುದಿಲ್ಲ. ನವಿಲುಗಳಿಂದ ಹಾವುಗಳು ಕಡಿಮೆಯಾಗಿವೆ ಎಂದು ಸಂತೋಷ ಸರನಾಡಗೌಡರ ಪ್ರತಿಕ್ರಿಯಿಸಿದರು.