Advertisement

ಹಾಸನದಲ್ಲಿ ತರಕಾರಿ ಖರೀದಿಗೆ ನೂಕು ನುಗ್ಗಲು

03:03 PM Apr 01, 2020 | Suhan S |

ಹಾಸನ: ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಜನತೆ ತರಕಾರಿ ಖರೀದಿಗೆ ಅವಕಾಶ ನೀಡಲಾಗಿದ್ದು, ತರ ಕಾರಿ ಖರೀದಿಗೆ ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು.

Advertisement

ಲಾಕ್‌ಡೌನ್‌ ಜಾರಿಯಾದ ನಂತರ ತರಕಾರಿಗಳ ದರ ಏರುತ್ತಾ ಸಾಗಿದೆ. ಈರುಳ್ಳಿ ಕೇಜಿಗೆ 40 ರೂ., ಟೊಮೆಟೋ 20 ರಿಂದ 30 ರೂ., ಆಲೂಗಡ್ಡೆ ಕೇಜಿಗೆ 40 ರೂ., ಬೆಳ್ಳುಳ್ಳಿ ಕೇಜಿಗೆ 200 ರೂ., ಬೀನ್ಸ್‌ 40 ರೂ., ಅವರೆಕಾಯಿ 60 ರೂ., ಬೀನ್ಸ್‌ 80 ರೂ., ನುಗ್ಗೆಕಾಯಿ 50 ರೂ. ಪುಟ್ಟಬಾಳೆ ಹಣ್ಣು 60 ರೂ. ದರದಲ್ಲಿ ಮಾರಾಟವಾಯಿತು. ಗ್ರಾಹಕರು ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ವ್ಯಾಪಾರಿಗಳು ಹೇಳಿದ ದರ ನೀಡಿ ತರಕಾರಿ ಖರೀದಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿ.ಎಂ.ರಸ್ತೆಯಲ್ಲಿ ವಾಹನಗಳ ಸಂಚಾ ರದ ದಟ್ಟಣೆ ಯುಂಟಾಗಿತ್ತು. ತರಕಾರಿ ಖರೀದಿ, ಪಟ್ರೋಲ್‌ಗಾಗಿ ಜನರು ಹೊರಬಂದಿದ್ದ ರಿಂದ ಹಾಸನಾಂಬ ದೇವಾಲಯದ ವೃತ್ತ, ಹೊಸಲೈನ್‌ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಪೆಟ್ರೋಲ್‌ ಬಂಕ್‌ ಗಳನ್ನು ವಾರದಲ್ಲಿ ನಾಲ್ಕುದಿನ ಮಾತ್ರ ತೆರೆಯಲು ಅವಕಾಶ ನೀಡಿರುವ ಹಿನ್ನಲೆ ಯಲ್ಲಿ ಮಂಗಳವಾರ ಪೆಟ್ರೋಲ್‌ಬಂಕ್‌ಗಳಲ್ಲಿಯೂ ಬೈಕ್‌ಗಳ ಸವಾರರು ಸಾಲು ಗಟ್ಟಿ ಪೆಟ್ರೋಲ್‌ ತುಂಬಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next