Advertisement

ಶಾಲೆ ಆವರಣದಲ್ಲಿ ಹಳ್ಳಿ ಅನಾವರಣ

03:57 PM Jan 14, 2020 | Suhan S |

ಗಂಗಾವತಿ: ಗ್ರಾಮೀಣ ಜನಪದವನ್ನುಬಿಟ್ಟು ಬದುಕು ದುಸ್ತರವಾಗಿದ್ದು, ಮಾನವೀಯ ಸಂಬಂಧಗಳು ದೂರವಾಗಿವೆ ಎಂದು ಸಾಹಿತಿ ಶಂಭುಬಳಿಗಾರ ಹೇಳಿದರು.

Advertisement

ಅವರು ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪಬ್ಲಿಕ್‌ ಶಾಲೆ ವಾರ್ಷಿಕೋತ್ಸವದ ನಿಮಿತ್ತ ಚಿಣ್ಣರ ಜಾನಪದ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಜಾಗತೀಕರಣ ನೆಪದಲ್ಲಿ ಗ್ರಾಮೀಣ ಬದುಕನ್ನು ದೂರ ಮಾಡುವ ಮೂಲಕ ಜನರು ಪರಿತಪಿಸುವಂತಾಗಿದೆ. ಹಳ್ಳಿಯ ಸ್ವಾವಲಂಬಿ ಬದುಕು ಇಲ್ಲವಾಗಿದ್ದು, ನಗರ ಪ್ರದೇಶವನ್ನು ಪ್ರತಿಯೊಬ್ಬರುಅವಲಂಭಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಕಲಬೆರಿಕೆ ಆಹಾರ ವಸ್ತುಗಳ ಮೂಲಕ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಅವಿಭಕ್ತಕುಟುಂಬಗಳು ಛಿದ್ರಗೊಂಡಿವೆ.

ಹಳ್ಳಿಯ ಸೊಬಗನ್ನು ಶಾಲಾ ಮಕ್ಕಳಿಗೆ ಪಾಲಕರಿಗೆ ದರ್ಶನ ಮಾಡಿಸಲು ಆಡಳಿತ ಮಂಡಳಿ ಚಿಣ್ಣರ ಜಾನಪದ ಜಾತ್ರೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನನ್ನು ಮೀರಿಸುವಂತೆ ಜಾನಪದ ಜಾತ್ರೆ ನಡೆದಿದ್ದು ಶಾಲೆಯ ಮಕ್ಕಳು ಪಾಲಕರು ಇದರಿಂದ ಪ್ರಭಾವಿತರಾಗಿಜಾನಪದ ಮಹತ್ವ ತಿಳಿಯಲು ಕಾರ್ಯಕ್ರಮ ಸಹಕಾರಿಯಾಗಿದೆ.ಹಳ್ಳಿಗಳಲ್ಲಿರುವಂತೆ ಗುಡಿಸಲು ಮನೆ, ದನಕರು, ಹೈನುಗಾರಿಕೆ, ಕುಂಬಾರಿಕೆ, ಗರಡಿಮನೆ, ವ್ಯವಸಾಯದ ಕ್ರಮ ಕೈಮಗ್ಗ, ದೇವರ ಭಜನೆ ದೇಗುಲದ ದೃಶ್ಯ, ಗೂಡಂಗಡಿ ಹೀಗೆ ಹತ್ತು ಹಲವು ಬಗೆಯ ಕೃತಕ ಕಲೆ ಸೃಷ್ಟಿ ಮಾಡಿದ್ದಾರೆ. ಶಾಲಾ ವಾರ್ಷಿಕೋತ್ಸವನ್ನು ಕ್ಯಾಸೆಟ್‌ ಡ್ಯಾನ್ಸ್‌ಗೆ ಸೀಮಿತಗೊಳಿಸದೇ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಜಿಪಂ ಚಿನ್ನಪಾಟಿ ವಿಜಯ ಲಕ್ಷ್ಮೀ ಎಪಿಎಂಸಿ ಸದಸ್ಯ ರಡ್ಡಿ ಶ್ರೀನಿವಾಸ, ತಾಪಂ ಸದಸ್ಯ ಮಹಮ್ಮದ್‌ ರಫಿ, ಪ್ರಭಾಕರ ಚಿನ್ನುಪಾಟಿ, ಜಗನ್ನಾಥ ಆಲಂಪಲ್ಲಿ, ಪಾರ್ಥಸಾರಥಿ, ಪ್ರಿಯಾಕುಮಾರಿ, ಶಾರೋನ್‌ ಕುಮಾರಿ ಸೇರಿ ಆಡಳಿತ ಮಂಡಳಿಯವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next