Advertisement

ಗ್ರಾಮೀಣ ಪ್ರವಾಸೋದ್ಯಮ ರಾಷ್ಟ್ರೀಯ ವಿಡಿಯೋ ಸ್ಪರ್ಧೆ: ವಿಜಯ ಬಳ್ಳಾರಿಗೆ ತೃತಿಯ ಸ್ಥಾನ

03:14 PM Feb 06, 2022 | Team Udayavani |

ಗಂಗಾವತಿ: ಭಾರತ ಸರಕಾರ ಹಾಗೂ ಪ್ರವಾಸೋದ್ಯ ಇಲಾಖೆ ಆಶ್ರಯದಲ್ಲಿ ಆಯಜಿಸಿದ್ದ ಆನ್‌ಲೈನ್ ಗ್ರಾಮೀಣ ಸಮುದಾಯ ಪ್ರವಾಸೋದ್ಯಮ ವಿಡಿಯೋ ಸ್ಪರ್ಧೆಯಲ್ಲಿ ನಗರದ ಹವ್ಯಾಸಿ ಛಾಯಚಿತ್ರ ಯುವಕಲಾವಿದ ವಿಜಯ ಬಳ್ಳಾರಿ ರಾಷ್ಟ್ರೀಯ ಮಟ್ಟದ ತೃತಿಯ ಬಹುಮಾನ ಪಡೆದಿದ್ದಾರೆ.

Advertisement

ಗ್ರಾಮೀಣ ಸಮುದಾಯ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಆನ್‌ಲೈನ್ ನಲ್ಲಿ ರಾಷ್ಟçಮಟ್ಟದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ನೂರಾರು ಕಲಾವಿದರು ತಮ್ಮ ಭಾಗದ ಗ್ರಾಮೀಣ ಸಮುದಾಯದ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ವಿಡಿಯೋಗಳ ತುಣುಕುಗಳನ್ನು ಪ್ರದರ್ಶನ ಮಾಡಿದರು. ತೃತಿಯ ಬಹುಮಾನ ವಿಜೇತ ವಿಜಯ ಬಳ್ಳಾರಿ ತಾಲೂಕಿನ ಆನೆಗೊಂದಿ ಕಿಷ್ಕಿಂದಾ ಅಂಜನಾದ್ರಿ ಹಾಗೂ ಹಂಪಿ ಪ್ರದೇಶದ ಪ್ರಾಕೃತಿಕ ಸೌಂದರ್ಯ, ಗುಡ್ಡಗಾಡು ಪ್ರದೇಶ ಹಾಗೂ ಸ್ಮಾರಕಗಳ ಪ್ರವಾಸೋದ್ಯಮದ ಕುರಿತು ತಯಾರಿಸಿದ ಡಾಕ್ಯುಮೆಂಟರಿ ನಿರ್ಣಯಕರ ಗಮನ ಸೆಳೆದಿದ್ದರಿಂದ ತೃತಿಯ ಬಹುಮಾನ ಲಭಿಸಿದೆ.

ಗ್ರಾಮೀಣ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ  ಅಗತ್ಯ: ರಾಷ್ಟ್ರೀಯ ಮಟ್ಟದ ತೃತಿಯ ಬಹುಮಾನ ಪಡೆದ ಕಲಾವಿದ ವಿಜಯ ಬಳ್ಳಾರಿ ಉದಯವಾಣಿ ಜತೆ ಮಾತನಾಡಿ, ಜಾಗತೀಕ ಮಟ್ಟದಲ್ಲಿ ಪ್ರವಾಸೋದ್ಯಮ ಅಧಿಕ ಆದಾಯ ತರುವ ಉದ್ಯಮವಾಗಿದ್ದು ಕಿಷ್ಕಿಂದಾ ಅಂಜನಾದ್ರಿ ಹಾಗೂ ಸುತ್ತಲಿನ ಪ್ರದೇಶ ಗ್ರಾಮೀಣ ಸಮುದಾಯದ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿದೆ. ರಾಜ್ಯ ಕೇಂದ್ರ ಸರಕಾರಗಳು ಇಲ್ಲಿಯ ಪ್ರವಾಸೋದ್ಯಮದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು ಸ್ಥಳೀಯರಿಗೆ ಅಗತ್ಯ ತರಬೇತಿ  ನೀಡುವ ಮೂಲಕ ಮುಂಬರುವ ದಿನಗಳಲ್ಲಿ ಈ ಭಾಗ ಪ್ರವಾಸೋದ್ಯಮದಿಂದಲೇ ಆದಾಯ ಗಳಿಸುವಂತಹ ಸ್ಥಿತಿಯುಂಟಾಗಲಿದ್ದು ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next