Advertisement

ಗ್ರಾಮೀಣ ವಿದ್ಯಾರ್ಥಿಗಳು ಕ್ರೀಡೆಯತ್ತ ಗಮನಹರಿಸಿ

09:45 PM Aug 23, 2019 | Team Udayavani |

ಸಂತೆಮರಹಳ್ಳಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದೈಹಿಕವಾಗಿ ಹೆಚ್ಚು ಸದೃಢರಾಗಿರುತ್ತಾರೆ. ಇವರು ಕ್ರೀಡೆಗಳಿಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ವಿ.ಆರ್‌.ಶ್ಯಾಮಲಾ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಜೆಎಸ್‌ಎಸ್‌ ಮಹಿಳಾ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಕ್ರೀಡಾಕೂಟದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಅವರು ಸ್ಪರ್ಧಿಸಿರುವ ಕ್ರೀಡೆಗಳಲ್ಲಿ ಹೆಚ್ಚಿನ ತರಬೇತಿ ನೀಡಲು ಈ ಬಾರಿ ಅವಕಾಶವಿದೆ. ಇಂಥವರನ್ನು ಆಯ್ಕೆ ಮಾಡಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕಳುಹಿಸಲು ತಯಾರಿ ನಡೆಸ ಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಮಾದರಿಯಾಗಿ: ಜಿಪಂ ಸದಸ್ಯ ಜೆ.ಯೋಗೇಶ್‌ ಮಾತನಾಡಿ, ಯಳಂದೂರು ತಾಲೂ ಕು ಕ್ರೀಡೆಯಲ್ಲಿ ಅತ್ಯಂತ ಪ್ರಗತಿ ಸಾಧಿಸಿದ ದಾಖಲೆ ಗಳನ್ನು ಹೊಂದಿದೆ. ಇಲ್ಲಿನ ವಾಲಿಬಾಲ್‌ ತಂಡ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ವಿಜಯಿಸಿದ ಉದಾಹರಣೆಗಳಿವೆ. ಇದು ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.

ಪ್ರೇರೇಪಣೆ ನೀಡಿ: ಇಲ್ಲಿನ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು. ಇದಕ್ಕೆ ಅಗತ್ಯವಾದ ವಾತಾವರಣವನ್ನು ಶಿಕ್ಷಕರು ನಿರ್ಮಿಸಿಕೊಡಬೇಕು. ಪ್ರತಿಯೊಬ್ಬ ಶಾಲಾ ವಿದ್ಯಾರ್ಥಿಗಳಲ್ಲಿಯೂ ವಿಭಿನ್ನ ಆಸಕ್ತಿ ಇರುತ್ತದೆ. ಇದನ್ನು ಗುರುತಿಸು ಅವರನ್ನು ಆ ವಿಷಯದಲ್ಲಿ ಪ್ರೇರೇಪಣೆಗೊಳಿಸಿ ಇದಕ್ಕೆ ಸಿದ್ಧಗೊಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.

Advertisement

ಪೋಷಕರ ನೆರವು ಅಗತ್ಯ: ಸರ್ಕಾರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಅವರಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾಸಕ್ತಿಯನ್ನು ಮೂಡಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಇದಕ್ಕೆ ನೂರಾರು ಕೋಟಿ ಹಣ ವ್ಯಯಿಸುತ್ತಿದೆ. ಇದರ ಉದ್ದೇಶ ಸಫ‌ಲವಾಗಬೇಕಾದರೆ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಇದಕ್ಕೆ ಪೋಷಕರ ನೆರವು ಅಗತ್ಯವಾಗಿದೆ ಎಂದರು.

ತಾಪಂ ಉಪಾಧ್ಯಕ್ಷೆ ಮಲ್ಲಾಜಮ್ಮ, ತಹಶೀಲ್ದಾರ್‌ ವರ್ಷಾ, ಜೆಎಸ್‌ಎಸ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್‌.ಎಂ.ಸ್ವಾಮಿ, ಜೆಎಸ್‌ಎಸ್‌ ಪ್ರಾಂಶುಪಾಲೆ ಅಕ್ಕಮಹಾದೇವಮ್ಮ, ಪ್ರಾಂಶುಪಾಲ ಆರ್‌. ಶಶಿಧರ್‌, ನಂದಿನಿ, ಉಪನ್ಯಾಸಕರಾದ ಕೆ.ಎಸ್‌.ಕೃಷ್ಣಮೂರ್ತಿ, ಕೆ.ಎಸ್‌.ಸಂತೋಷ್‌, ಉಮೇಶ್‌, ಶಂಕರ್‌, ರೂಪಾ, ನಾಗಮ್ಮ, ಶೀಲಾ, ಬಿಂದು, ಕಾವ್ಯಾ, ಇಸಿಒ ಶಿವಲಂಕಾರ್‌, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮುರುಳಿ, ಉಪಾಧ್ಯಕ್ಷ ಕೆಸ್ತೂರು ಮಲ್ಲಿಕಾರ್ಜುನ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next