Advertisement

ಹಳ್ಳಿಗಾಡಿನ ತಿಂಡಿ-ತಿನಿಸುಗಳಲ್ಲಿ ಔಷಧೀಯ ಗುಣವಿದೆ: ಕೆ. ಬಿ. ಪೂಜಾರಿ

01:11 PM Jul 31, 2019 | Team Udayavani |

ಮುಂಬಯಿ, ಜು. 30: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ವಸಾಯಿ ಸ್ಥಳೀಯ ಸಮಿತಿಯ ವತಿಯಿಂದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮವು ಜು. 28 ರಂದು ಸಂಜೆ ವಸಾಯಿ ಪಶ್ಚಿಮದ, 100 ಪೀಟ್ ಅಂಬಾಡಿ ಕ್ರಾಸ್‌ ರೋಡ್‌, ಎವರ್‌ಶೈನ್‌ ಕಾಂಪ್ಲೆಕ್ಸ್‌ ಹಿಂದುಗಡೆ , ಧನ್‌ ರಾಜ್‌ ಪ್ಯಾಲೆಸ್‌ನ ತಳಮಹಡಿಯಲ್ಲಿರುವ ಸಮಿತಿಯ ಕಚೇರಿಯಲ್ಲಿ ಜರಗಿತು.

Advertisement

ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಾರತ್‌ ಬ್ಯಾಂಕಿನ ನಿರ್ದೇಶಕ ಕೆ. ಬಿ. ಪೂಜಾರಿ, ಅತಿಥಿ ಒ. ಪಿ. ಪೂಜಾರಿ, ಬಿಲ್ಲವರ ಅಸೋಸಿಯೇಶನ್‌ ವಸಾಯಿ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಡಾ| ಆರ್‌. ಜಿ. ಕೂಳೂರು, ಕಾರ್ಯಾಧ್ಯಕ್ಷ ಕರುಣಾಕರ ಜಿ. ಅಮೀನ್‌, ಗೌರವ ಕಾರ್ಯದರ್ಶಿ ಲೋಹಿತಾಕ್ಷ ಎಸ್‌. ಅಂಚನ್‌, ಗೌರವ ಕೋಶಾಧಿಕಾರಿ ನಾಗೇಶ್‌ ಎ. ಸುವರ್ಣ, ಜತೆ ಕಾರ್ಯದರ್ಶಿ ಸುರೇಶ ಎಂ. ಪೂಜಾರಿ,ಜತೆ ಕೋಶಾಧಿಕಾರಿ ಸುರೇಶ್‌ ಸಿ. ಪೂಜಾರಿ, ಕೇಂದ್ರ ಕಾರ್ಯಾಲಯದ ಪ್ರತಿನಿಧಿ ಸದಾಶಿವ ಕರ್ಕೇರ, ಮಹಿಳಾ ವಿಭಾಗದ ವಿಲಾಸಿನಿ ಕೆ. ಸಾಲ್ಯಾನ್‌, ರೇಖಾ ಪೂಜಾರಿ, ನಳಿನಿ ಆರ್‌. ಪೂಜಾರಿ, ನೈನಾ ಅಂಚನ್‌, ರಾಘವೇಂದ್ರ ಪಿ. ಸಾಲ್ಯಾನ್‌, ಕೃಷ್ಣ ಟಿ. ಪೂಜಾರಿ, ಜಗನ್ನಾಥ್‌ ಅಂಚನ್‌, ಅರುಣಾ ಡಿ. ಪೂಜಾರಿ, ನಾರಾಯಣ ಕುಕ್ಯಾನ್‌, ಆರ್ಚಕರಾದ ಶರತ್‌ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ವಿಭಾಗದವರು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಾರತ್‌ ಬ್ಯಾಂಕಿನ ನಿರ್ದೇಶಕ ಕೆ. ಬಿ. ಪೂಜಾರಿ ಅವರು ಮಾತನಾಡಿ, ಯಾವುದೇ ಬೆಳೆಗಳನ್ನು ಬೆಳೆಸಲಾಗದ ಆಟಿ ತಿಂಗಳಿನಲ್ಲಿ ಕಡು ಬಡತನ ಕೃಷಿಕರನ್ನು ಆವರಿಸಿತ್ತು. ಹಸಿವು ನಿವಾರಿಸಲು ಅವರು ಪ್ರಕೃತಿಯನ್ನು ಅವಲಂಬಿಸಿದ್ದರು. ಮಾನವ ಮತ್ತು ಭೂಮಿ ತಾಯಿಯ ಅವಿನಾಭಾವ ಸಂಬಂಧದಿಂದ ಆಟಿ ಮಾಸದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ ತಯಾರಿಸುವ ಅವರ ತಿಂಡಿ ತಿನಿಸುಗಳಲ್ಲಿ ಔಷಧಿಯ ಗುಣಗಳಿದ್ದವು. ಜಾನಪದ ಔಷಧೀಯ ಯಾದಿಯಲ್ಲಿ ಆಗ್ರಸ್ಥಾನದಲ್ಲಿರುವ ಹಾಲೆ ಮರದ ಹಾಲು ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತಿತ್ತು. ಹಿರಿಯರಿಂದ ಬಂದಿರುವ ಪ್ರತಿಯೊಂದು ಆಚರಣೆಯ ಹಿಂದೆ ವೈಜ್ಞಾನಿಕ ಹಿನ್ನೆಲೆ ಇದೆ. ಅವುಗಳನ್ನು ಶಾಶ್ವತಗೊಳಿಸುವ ಶೋಧನ ಕಾರ್ಯ ನಮ್ಮದಾಗಬೇಕುಎಂದರು.

ಬಿಲ್ಲವರ ಅಸೋಸಿಯೇಶನ್‌ ವಸಾಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಜಿ. ಅಮೀನ್‌ ಮಾತನಾಡಿ, ವಿವಿಧತೆಯಲ್ಲಿ ಏಕತೆ ಸಾರುವ ಹಬ್ಬ ಆಚರಣೆಗಳು ಕೌಟುಂಬಿಕ ಜೀವನಕ್ಕೆ ಅಡಿಪಾಯವಾಗಿದೆ. ಸಹಮತ, ಸಹಬಾಳ್ವೆ, ಜೀವನ ಮೌಲ್ಯದೊಂದಿಗೆ ಮೃದುತ್ವದ ಸಂಕೇತವಾಗಿರುವ ತುಳುತನವನ್ನು ಮೆರೆಯುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅವರು ವಸಾಯಿ ಕರ್ನಾಟಕ ಸಂಘ ಏರ್ಪಡಿಸಿದ್ದ ಭಜನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಬಿಲ್ಲವರ ಅಸೋಸಿಯೇಶನ್‌ ವಸಾಯಿ ಸ್ಥಳೀಯ ಸಮಿತಿಯ ಮಹಿಳಾ ಸದಸ್ಯೆಯರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು.

Advertisement

ಹಿರಿಯ ಸಮಾಜ ಸೇವಕ ಒ. ಪಿ. ಪೂಜಾರಿ, ವಿಲಾಸಿನಿ ಸಾಲ್ಯಾನ್‌, ನಳಿನಿ ಆರ್‌. ಪೂಜಾರಿ, ಆನಂದ ಪೂಜಾರಿ ಆಟಿ ತಿಂಗಳ ಮಹತ್ವದ ಬಗ್ಗೆ ಮಾತನಾಡಿದರು. ಗೌರವ ಕಾರ್ಯದರ್ಶಿ ಲೋಹಿತಾಕ್ಷ ಎಸ್‌. ಅಂಚನ್‌ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಹಿಳೆಯರು ಸಿದ್ದಪಡಿಸಿ ತಂದಿದ್ದ ತಿಮರೆ ಚಟ್ನಿ, ಉಪ್ಪಡ್‌ ಪಚ್ಚಿರ್‌, ಪುಂಡಿಗಸಿ, ಸೇಮೆದಡ್ಡೆ, ನುಗ್ಗೆವಡೆ, ತೇವು ಚಟ್ನಿ, ತೋಜಂಕ್‌, ಪತ್ರೋಡೆ, ಕುಡುತ್ತಸಾರ್‌, ಮೂಡೆ ಕುಕ್ಕು ಚಟ್ನಿ, ಮೆಂತೆ ಗಂಜಿ, ಸಾನದಡ್ಡೆ ಮೊದಲಾದ ತಿನಸುಗಳನ್ನು ಉಣಬಡಿಸಲಾಯಿತು. ವಿವಿಧ ಸ್ಥಳೀಯ ಸಮಿತಿಯ ಸದಸ್ಯರು, ಯುವ ವಿಭಾಗದವರು ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಸದಸ್ಯೆಯರು ಸಹಕರಿದರು.

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next