ಬಂಗಾರಪೇಟೆ: ತಾಲೂಕು ಕೇಂದ್ರ ಸ್ಥಾನದಿಂದ ಇತಿಹಾಸ ಪ್ರಸಿದ್ಧ ಹೈದರಾಲಿ ಹುಟ್ಟಿದ ಬೂದಿಕೋಟೆಯಿಂದ ತಮಿಳುನಾಡು ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಮಾರ್ಗ ಹಾಗೂ ಬಂಗಾರಪೇಟೆ-ಕಾಮಸಮುದ್ರ ಮಾರ್ಗದ ಮೂಲಕ ತಮಿಳುನಾಡು ಗಡಿಭಾಗಕ್ಕೆ ಹೋಗುವಂತಹ ಈ ರಸೆಗಳು ಸುಮಾರು ಐದಾರು ವರ್ಷಗಳಿಂದಲೂ ಅಭಿವೃದ್ಧಿಯಾಗದೆ ಹಾಗೇ ಉಳಿದಿವೆ.
ತಾಲೂಕಿನ ಬಲಮಂದೆ ಗ್ರಾಪಂ ವ್ಯಾಪ್ತಿಯ ಕೊಳಮೊರು ಗ್ರಾಮದಿಂದ ತಮಿಳುನಾಡಿಗೆ ಹೋಗುವ ರಸ್ತೆ ಸುಮಾರು ದಿನಗಳಿಂದ ಹದಗೆಟ್ಟಿದ್ದು ರಾಜಕಾರಣಿಗಳಿಗೆ, ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ರಸ್ತೆ ದುರಸ್ತಿ ಕಾರ್ಯ ಮರೀಚಿಕೆಯಾಗಿದೆ. ಗುರುವಾರಬೆಳಗಿನ ಜಾವ ಟೊಮೆಟೋ ಹಾಕಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಬಿದ್ದು ವಾಹನ ಚಾಲಕ ಸಾವಿನಿಂದ ಪಾರಾಗಿದ್ದಾನೆ. ತಮಿಳುನಾಡು ಗಡಿ ಯಾವ ಕಡೆ ವಾಹನಗಳು ಹೊಗಲು ರಸ್ತೆ ದುರಸ್ತಿ ಮಾಡುವವರೆಗೂ ಸಾಧ್ಯವೇ ಇಲ್ಲ. ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ಹೆಚ್ಚಾಗಿ ಭಾರೀ ತೂಕ ಹೊತ್ತ ವಾಹನಗಳು ಓಡಾಡುವುದರಿಂದ ಕಿತ್ತುಹೋಗಿರುವ ರಸ್ತೆಯು ಇನ್ನೂ ಹೆಚ್ಚಾಗಿ ಹದೆಗೆಟ್ಟಿರುವುದಕ್ಕೆಸಾಕ್ಷಿಯಾಗಿದೆ. 10 ವರ್ಷಗಳಿಂದ ಡಾಂಬರು ಹಾಗೂ ಪ್ಯಾಚ್ ವರ್ಕ್ ಕಾಣದ ಈ ರಸ್ತೆಯಉದ್ದಕ್ಕೂ ಹಳ್ಳ ಗುಂಡಿಗಳು ಸಾರ್ವಜನಿಕರು ದ್ವಿಚಕ್ರಹಾಗೂ ಇತರೆ ಯಾವುದೇ ವಾಹನಗಳು ಓಡಾಡಲುಸಾಧ್ಯವೇ ಇಲ್ಲದಂತಾಗಿದೆ.
ಸಾರ್ವಜನಿಕರಿಗೆ ತೀವ್ರ ಅನುಕೂಲವಾಗಿರುವ ಈ ರಸ್ತೆಯು ಜನಪ್ರತಿನಿಧಿಗಳು ಹಾಗೂ ಇಲಾಖೆಯಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಮಳೆಗಾಲ ಪ್ರಾರಂಭಗೊಂಡರೆ ದ್ವಿಚಕ್ರ ವಾಹನಗಳು ಸೇರಿದಂತೆ ವಾಹನಗಳು ಓಡಾಡಲು ತೀವ್ರ ಕಷ್ಠವೇ ಆಗಿದ್ದರೂ ಜನಪ್ರತಿನಿಧಿಗಳು ಜಾಣಮೌನ ವಹಿಸಿದ್ದಾರೆ.
ತಾಲೂಕಿನ ಕಳೆದ 3 ವರ್ಷಗಳಿಂದ ಪ್ರತಿವರ್ಷವೂ ಮಳೆ ಬರುತ್ತಿದೆ. ಈ ವೇಳೆ ರಸ್ತೆಗಳ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ದಶಕದ ಹಿಂದೆ ಈ ಮಾರ್ಗಗಳಲ್ಲಿನಿರ್ಮಾಣ ಮಾಡಿರುವ ಮೋರಿಗಳು ತೀರಾ ಹದೆಗೆಟ್ಟಿದ್ದರೂ ಯಾವ ಅಧಿಕಾರಿಗಳೂ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ತಾಲೂಕಿನ ಗಡಿಭಾಗವಾಗಿರುವ ಕಾಮಸಮುದ್ರ ಹೋಬಳಿಯ ರಸ್ತೆಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿದ್ದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿಲ್ಲ.ವಿದ್ಯಾರ್ಥಿಗಳು ಹಾಗೂ ಜನರು ಓಡಾಡಲುತೀವ್ರ ಕಷ್ಠವೇ ಆಗಿದೆ. ಮಳೆ ಬಂದರೆ ರಸ್ತೆಗಳೇ ಕೆರೆಯಂತಾಗುತ್ತಿವೆ.
-ಶ್ರೀರಾಮ್ ವಿರಾಟ್, ಸ್ಥಳೀಯರು,