ಹಳೆಯಂಗಡಿ: ಮುಖ್ಯ ಮಂತ್ರಿಯವರ ವಿಶೇಷ ಅನುದಾನವು ನೇರವಾಗಿ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಒದಗಿಸಲಾಗುತ್ತಿದ್ದು, ಪಟ್ಟಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ, ಕಾಂಕ್ರೀಟೀಕರಣಗೊಳಿಸಲಾಗುತ್ತಿದೆ. ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿಯೇ ಗರಿಷ್ಠವಾದ ಅನುದಾನ ಬಳಕೆಯಾಗಿದೆ ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಗ್ರಾ.ಪಂ.ನ ಸಾಗ್‌ನ ಜುಮ್ಮಾ ಮಸೀದಿಯ ರಸ್ತೆಗೆ ಡಿ. 9ರಂದು 50 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಹಳೆಯಂಗಡಿ ಗಾ.ಪಂ.ನ ಅಧ್ಯಕ್ಷೆ ಜಲಜಾ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಗ್ ಮಸೀದಿಯ ಧರ್ಮಗುರು ಇಬ್ರಾಹಿಂ ಮುಸ್ಲಿಯಾರ್ ಆಶೀರ್ವಚನ ನೀಡಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ವಸಂತ ಬೆರ್ನಾರ್ಡ್, ಕರಾವಳಿ ಪ್ರಾಧಿಕಾರದ ಸದಸ್ಯ ಸಾಹುಲ್ ಹಮೀದ್ ಕದಿಕೆ, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ಹಮೀದ್, ಬಶೀರ್ ಸಾಗ್, ಶರ್ಮಿಳಾ ಕೋಟ್ಯಾನ್, ಚಿತ್ರಾ ಸುರೇಶ್, ಮೂಲ್ಕಿ ನಗರ ಪಂಚಾಯತ್‌ನ ಸದಸ್ಯರಾದ ಬಿ.ಎಂ. ಆಸೀಫ್, ಅಶೋಕ್ ಪೂಜಾರ್, ಪುತ್ತುಬಾವ, ಸಾಗ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್, ಪಡುಪಣಂಬೂರು ಗ್ರಾಮ ಸಮಿತಿಯ ಅಧ್ಯಕ್ಷೆ ಸವಿತಾ ಶರತ್ ಬೆಳ್ಳಾಯರು, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರಾದ ಧರ್ಮಾನಂದ ಶೆಟ್ಟಿಗಾರ್ ತೋಕೂರು, ವಾಹಿದ್ ತೋಕೂರು, ಮಾಜಿ ಜಿ.ಪಂ. ಅಧ್ಯಕ್ಷೆ ಸುಗಂಧಿ ಕೊಂಡಾಣ, ಮಾಜಿ ತಾ.ಪಂ. ಸದಸ್ಯ ರಾಜು ಕುಂದರ್, ದಿನೇಶ್ ಸುವರ್ಣ, ಇಂಜಿನಿಯರ್ ಪ್ರಶಾಂತ್‌ಕುಮಾರ್ ಆಳ್ವಾ, ಗುತ್ತಿಗೆದಾರ ಅಬ್ಟಾಸ್ ಆಲಿ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು. ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಸ್ವಾಗತಿಸಿದರು, ಹಳೆಯಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ಮನ್ಸೂರ್ ಸಾಗ್ ನಿರೂಪಿಸಿ, ವಂದಿಸಿದರು.