Advertisement
ಕೆಸರು ತುಂಬಿದ ರಸ್ತೆಗಳು: ತಾಲೂಕಿನ ಯಾವುದೇ ಭಾಗಕ್ಕೆ ಹೋದರೂ ಹದಗೆಟ್ಟ ರಸ್ತೆಗಳು ಕಣ್ಣಿಗೆಬೀಳುತ್ತವೆ. ಜಡಿ ಮಳೆಯಿಂದ ರಸ್ತೆ ಗುಂಡಿಗಳಲ್ಲಿನೀರು ತುಂಬಿದ್ದು ಬೈಕ್ ಮತ್ತಿತರ ವಾಹನಗಳಲ್ಲಿಸಂಚರಿಸುವ ರೈತರ ಮಕ್ಕಳು ರಸ್ತೆ ಗುಂಡಿಗೆಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣಜನತೆ ಕೆಸರು ತುಂಬಿರುವ ರಸ್ತೆಗಳಲ್ಲಿ ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ.
Related Articles
Advertisement
ಇಲ್ಲಿನ ಬಡಾವಣೆಗಳಲ್ಲಿ ವ್ಯವಸ್ಥಿತ ಒಳಚರಂಡಿಯೇ ಇಲ್ಲವಾಗಿದೆ. ಕೆಲವುಕಡೆ ರಸ್ತೆಯ ಒಂದು ಭಾಗದಲ್ಲಿ ಒಳಚರಂಡಿ ಇದ್ದರೆ ಮತ್ತೂಂದು ಭಾಗದಲ್ಲಿ ಚರಂಡಿಯಿಲ್ಲ. ಇನ್ನು ಕೆಲವು ಕಡೆ ರಸ್ತೆಯ ಎರಡೂ ಕಡೆ ಒಳಚರಂಡಿಯೇ ಇಲ್ಲದೆ ಗಲೀಜು ನೀರು ಮತ್ತುಮಳೆ ನೀರು ನಡುರಸ್ತೆಯಲ್ಲಿ ಹರಿದು ರಸ್ತೆ ಕೊರಕಲು ಉಂಟಾಗಿದೆ. ಇತ್ತೀಚೆಗೆ ಪಟ್ಟಣದಒಂದೆರಡು ರಸ್ತೆಗಳ ಗುಂಡಿ ಮುಚ್ಚಿ ಉತ್ಸಾಹ ತೋರಿದ ಪುರಸಭೆ ಮತ್ತೆ ತಣ್ಣಗಾಗಿದೆ.
ತಿರುಗಿ ನೋಡಿ: ಜು.21 ರಂದು ಸಚಿವ ನಾರಾಯಣಗೌಡರ ಹುಟ್ಟುಹಬ್ಬ. ಕೆಸಿಎನ್‌ಹುಟ್ಟು ಹಬ್ಬದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಪಟ್ಟಣಕ್ಕೆ ಆಗಮಿಸಿ ಹಲವುಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಪಟ್ಟಣಕ್ಕೆ ಬರುತ್ತಿರುವಮುಖ್ಯಮಂತ್ರಿಗಳೇ ಒಮ್ಮೆ ನಮ್ಮ ತಾಲೂಕಿನ ಗ್ರಾಮೀಣ ರಸ್ತೆಗಳ ಕಡೆ ತಿರುಗಿ ನೋಡಿ ಎಂದು ರೈತ ಮುಖಂಡ ಬೂಕನಕೆರೆ ನಾಗರಾಜು ಒತ್ತಾಯಿಸಿದ್ದಾರೆ.
ತಾಲೂಕಲ್ಲಿ ಅಭಿವೃದ್ಧಿ ಮರೀಚಿಕೆ :
ತಾಲೂಕು ಕೇಂದ್ರಕ್ಕೆ ಇರಬೇಕಾದ ಹಲವಾರು ಸೌಲಭ್ಯ ಒದಗಿಸುವಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಅಭಿವೃದ್ಧಿಗಾಗಿಯೇ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡರು ಮಾತೃ ಪಕ್ಷ ಜೆಡಿಎಸ್ ತ್ಯಜಿಸಿ ಬಿಜೆಪಿ ಸೇರಿ ಪ್ರಭಾವಿ ಸಚಿವರಾಗಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಚುನಾವಣೆಯ ಸಂದರ್ಭದಲ್ಲಿ ಸಚಿವ ನಾರಾಯಣಗೌಡ ಕೆ.ಆರ್.ಪೇಟೆಯನ್ನು ಶಿಕಾರಿಪುರ ಮಾಡುವುದಾಗಿ ಎಲ್ಲೆಡೆ ಹೇಳುತ್ತಿದ್ದರು. ತಾಲೂಕಿನ ಸ್ಥಿತಿ ನೋಡಿ ಸಾರ್ವಜನಿಕರುಬಿ.ಎಸ್.ಯಡಿಯೂರಪ್ಪ ಅವರ ಶಿಕಾರಿಪುರವೂ ನಮ್ಮಕೆ.ಆರ್.ಪೇಟೆಯಷ್ಟೇ ಹದಗೆಟ್ಟಿದೆಯಾ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
– ಅರುಣ್‌ಕುಮಾರ್