ಶನಿವಾರಸಂತೆ :-ಆಲೂರುಸಿದ್ದಾಪುರ ಗ್ರಾ.ಪಂ.ಯ 2019-20ನೇ ಸಾಲಿನ ಗ್ರಾಮಸಭೆ ಗ್ರಾ.ಪಂ.ಅಧ್ಯಕ್ಷೆ ವೀಣಾರಮೇಶ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮೂದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಜಿ.ಪಂ.ಗ್ರಾಮೀಣ ಜಿ.ಪಂ.ಅಭಿಯಂತರ ವೀರೇಂದ್ರ ಅವರು ಕೊಡಗು ಜಿಲ್ಲೆಯಲ್ಲಿ ಕಳೆದ ಮತ್ತು ಈ ವರ್ಷದ ಭಾರಿ ಮಳೇ ವಿಕೋಪದಿಂದ ಲೋಕೋಪಯೋಗಿ ಇಲಾಖೆ ಹಾಗೂ ಜಿ.ಪಂ.ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 1300 ಕಿ.ಮೀ.ನಷ್ಟು ರಸ್ತೆಗಳು ಹಾನಿಗೊಳಗಾಗಿದ್ದು 87 ಕಿ.ಮೀ ನಷ್ಟು ಜಿ.ಪಂ.ಗ್ರಾಮೀಣ ರಸ್ತೆ ಹಾನಿಗೊಳಗಾಗಿದ್ದು ಇದರಲ್ಲಿ ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ 27 ಕಿ.ಮೀ.ನಷ್ಟು ಗ್ರಾಮೀಣ ರಸ್ತೆ ಹಾನಿಗೊಳಗಾಗಿರುವ ಹಿನ್ನಲೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾ ಗಿದ್ದು ಮಳೆಹಾನಿ ಯೋಜನೆಯಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತದೆ ಹಾಗೂ ಕೆಲವು ಗ್ರಾಮೀಣ ರಸ್ತೆಗಳ ಕಾಮಗಾರಿ ಕಾರ್ಯ ಸಧ್ಯದಲ್ಲಿ ಪ್ರಾರಂಭಿಸಲಾಗುವುದೆಂದು ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮಸಭೆಗಳಲ್ಲಿ ನೀವು ಕಳೆದ ಐದಾರು ವರ್ಷಗಳಿಂದಲೂ ನಮ್ಮ ವ್ಯಾಪ್ತಿಯ ಗ್ರಾಮೀಣ ರಸ್ತೆಗಳನ್ನು ಅಭಿವೃದ್ದಿ ಪಡಿಸುತ್ತೇವೆ ಎಂದು ಸುಳ್ಳು ಹೇಳಿಕೊಂಡು ಬರುತ್ತಿರಷ್ಟೆ ನಮಗೆ ನಿಮ್ಮ ಸುಳ್ಳು ಆಶ್ವಾಸನೆ ಕೇಳಿ ಸಾಕಾಗಿದೆ ಎಂದು ತರಾಟೆಗೆ ತೆಗೆದುಕೊಂಡು ಇದಕ್ಕೆ ಕೆಲವು ಗ್ರಾ.ಪಂ.ಸದಸ್ಯರುಗಳು ಧ್ವನಿಗೂಡಿಸಿದರು ಆಲೂರುಸಿದ್ದಾಪುರದಲ್ಲಿ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಸಂದರ್ಭ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ತಡೆಗೋಡೆಗೆ ಅಂಚಿಗೆ ಹಾನಿಯಾಗಿದ್ದು ಹಾಗೂ ಆಸ್ಪತ್ರೆ ಗೇಟ್‌ಗೆ ಸರಿಯಾಗಿ ಚರಂಡಿ ಕಾಮಗಾರಿಯನ್ನು ಸ್ಥಗಿತಗೊಳಿಸಿರುವುದ್ದರಿಂದ ಚರಂಡಿ ನೀರಿನೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿಕೊಂಡಿದ್ದ ತೊಂದರೆ ಆಗುತ್ತಿರುವ ಕುರಿತು ಆರೋಗ್ಯ ಇಲಾಖೆ ಕುರಿತು ಮಾಹಿತಿ ನೀಡುತ್ತಿದ್ದ ವೇಳೆ ವೈದ್ಯಾಧಿಕಾರಿ ಡಾ.ಸುಪರ್ಣ ಸಭೆಯ ಗಮನಕ್ಕೆ ತಂದರು. ಅಲ್ಲದೆ ಆಸ್ಪತ್ರೆಗೆ ಒಬ್ಬ ಸ್ಟಾಪ್ ನರ್ಸ್ ಅಗತ್ಯ ಇದೆ ಎಂದರು, .ಜಿ.ಪಂ.ಸದಸ್ಯೆ ಸರೋಜಮ್ಮ, ನೋಡಲ್ ಅಧಿಕಾರಿ ಶೈಲಜಾ ಗ್ರಾ.ಪಂ.ಅಧ್ಯಕ್ಷೆ ವೀಣರಮೇಶ್ ತಾ.ಪಂ.ಸದಸ್ಯೆ ಲೀಲಾವತಿ, ಗ್ರಾ.ಪಂ.ಪಿಡಿಒ ಪೂರ್ಣಮಾ, ಕಾರ್ಯದರ್ಶಿ ಚಂದ್ರೇಗೌಡ, ಗ್ರಾ.ಪಂ.ಉಪಾಧ್ಯಕ್ಷೆ ಸತ್ಯ ಉಪಸ್ಥಿತರಿದ್ದರು.