ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಎಸ್ಪಿ ರವಿ.ಡಿ ಚೆನ್ನಣ್ಣನವರ್ ಹರ್ಷವ್ಯಕ್ತಪಡಿಸಿದರು. ನಗರದ ಟೌನ್ ಠಾಣೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಸಂಬಂಧ ನಿಯಮ 11 ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, ನೆಲಮಂಗಲ ಉಪವಿಭಾಗ ವ್ಯಾಪ್ತಿಯಲ್ಲಿ 1295 ವಾಹನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಲಾಕ್‌ಡೌನ್ ಮುಗಿಯುವವರೆಗೂ ನೆಪ ಹೇಳಿಕೊಂಡು ನಗರದ ಕಡೆ ಬರುವ ವಾಹನ ಚಾಲಕರಿಂದ ವಾಹನ ವಶಕ್ಕೆ ಪಡೆದು ಪರಿಸ್ಥಿತಿಗನು ಗುಣವಾಗಿ ಕೇಸ್
ದಾಖಲಿಸಿಕೊಳ್ಳಲಾಗುತ್ತದೆ ಎಂದರು.
Advertisement
ಗ್ರಾಮೀಣ ಪ್ರದೇಶ ಬೆಸ್ಟ್: ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಕಾರ್ಯಪಡೆ ಸಹಕಾರದೊಂದಿಗೆ ಲಾಕ್‌ಡೌನ್ ಯಶಸ್ವಿಯಾಗಿದೆ. ಹಳ್ಳಿಯ ಜನ ಕೋವಿಡ್ ಸೃಷ್ಟಿಸುತ್ತಿರುವ ಪರಿಸ್ಥಿತಿ ತಿಳಿದು ಮನೆಯಲ್ಲಿದ್ದಾರೆ. ಆದರೆ ಕೆಲವು ನಗರ ಪ್ರದೇಶಗಳಲ್ಲಿ ನೆಪ ಹೇಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣಪ್ರದೇಶಗಳು ಕೊರೊನಾ ನಿಯಂತ್ರಣ ಕ್ರಮಗಳ ಅನುಕರಣೆಯಲ್ಲಿ ಬೆಸ್ಟ್ ಎಂದರು.
ಮನವಿ ಮಾಡಿದರು. ಕರುಣೆ ಗೋಡೆ ನಿರ್ವಹಣೆ ಜವಾಬ್ದಾರಿಯನ್ನು ರಾಜಶೇಖರ್‌ಗೆ ನೀಡಿದರು. ಬಸ್ ನಿಲ್ದಾಣದಿಂದ ಪೊಲೀಸ್ ಠಾಣೆ ಸಮೀಪ ಅಥವಾ ಆವರಣದಲ್ಲಿ ಬದಲಿಸಿದರೆ ಬಳಕೆ ಪಾರದರ್ಶಕವಾಗಿರುತ್ತದೆ, ಅರ್ಹ ವ್ಯಕ್ತಿಗಳಿಗೆ ಸಿಗಲಿದೆ ಎಂದು ಸ್ಥಳೀಯರು ಮನವಿ ಮಾಡಿದರು. ಸಿಟಿ ರೌಂಡ್ಸ್: ನೆಲಮಂಗಲ ನಗರದ ಮುಖ್ಯರಸ್ತೆ, ಪೇಟೆಬೀದಿ, ಬಸ್ ನಿಲ್ದಾಣ, ತಾಲೂಕು ಕಚೇರಿ ಸೇರಿ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೂ ಜನರ
ಓಡಾಟ, ಅಂಗಡಿ ಮುಚ್ಚಿರುವುದು, ಸಾಮಾಜಿಕ ಅಂತರ ಸೇರಿ ನಗರದ ವಾಸ್ತವತೆ ಬಗ್ಗೆ ರೌಂಡ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ
ಸಂದೇಶ ನೀಡಿದ್ದಾರೆ.
Related Articles
ಬೈಕ್‌ಗಳನ್ನು ವಶಕ್ಕೆ ಪಡೆದು ದಂಡ ವಸೂಲಿ ಮಾಡುವುದು ನಮ್ಮ ಮೂಲ ಉದ್ದೇಶವಲ್ಲ, ಸುಖಾಸುಮ್ಮನೆ ಬರಬೇಡಿ ಎಂದು ಮನವಿ ಮಾಡಿದರೂ ಅನವಶ್ಯಕವಾಗಿ ಬರುವವರ ವಾಹನ ವಶಕ್ಕೆ ಪಡೆಯುವುದು ಅನಿವಾರ್ಯ. ದಂಡ ವಿಧಿಸದಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ ಆದ್ದರಿಂದ ಸಹಕರಿಸಬೇಕು, ಪರಿಸ್ಥಿತಿಗನುಗುಣವಾಗಿ ಕೇಸ್ ಕೂಡ ದಾಖಲಿಸಲಾಗುತ್ತದೆ ಎಂದು ಎಸ್ಪಿ ರವಿ.ಡಿ ಚೆನ್ನಣ್ಣನವರ್ ತಿಳಿಸಿದರು.
Advertisement