Advertisement

ಗ್ರಾಮೀಣ ಗ್ರಂಥಾಲಯಗಳು ಇನ್ನು ಅರಿವಿನ ಕೇಂದ್ರಗಳು: ಪ್ರಿಯಾಂಕ್‌

12:10 AM Mar 05, 2024 | Team Udayavani |

ಬೆಂಗಳೂರು: ಗ್ರಾಮೀಣ ಗ್ರಂಥಾಲಯಗಳನ್ನು “ಅರಿವು ಕೇಂದ್ರ’ಗಳೆಂದು ಹೆಸರಿಸಲಾಗಿದ್ದು, ಈ ಗ್ರಂಥಾಲಯಗಳಲ್ಲಿ ಈವರೆಗೆ 47.83 ಲಕ್ಷ ಮಕ್ಕಳು ನೋಂದಾಯಿಸಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪಂಚಾಯತ್‌ ರಾಜ್‌ ಆಯುಕ್ತಾಲಯದ ವತಿಯಿಂದ ಏರ್ಪಡಿಸಿದ್ದ ಗ್ರಾಮ ಪಂಚಾಯತ್‌ ಅರಿವು ಕೇಂದ್ರಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ, ಲೋಗೋ, ಪೋಸ್ಟರ್‌ ಕಟ್ಟಡ ವಿನ್ಯಾಸ, ಆರು ತಿಂಗಳ ಸರ್ಟಿಫಿಕೇಟ್‌ ಕೋರ್ಸ್‌ ಮತ್ತು ಅರಿವು ಕೇಂದ್ರಗಳ ಚಟುವಟಿಕೆಗಳ ಸಂಪುಟಗಳ ಬಿಡುಗಡೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ರಾಜ್ಯದ 5,895 ಗ್ರಾಮ ಪಂಚಾಯತ್‌ ಗ್ರಂಥಾಲಯಗಳಲ್ಲಿ 4,925 ಗ್ರಂಥಾಲಯಗಳಿಗೆ ಕಟ್ಟಡ, ಕಟ್ಟಡದ ನವೀಕರಣ, ಕೊಠಡಿಗಳು, ಓದುವ ಸಾಮಗ್ರಿಗಳನ್ನು ಇಡಲು ಕಪಾಟುಗಳು, ಅಗತ್ಯ ಪೀಠೊಪಕರಣಗಳು, ಪುಸ್ತಕ, ನಿಯತಕಾಲಿಕಗಳ ಸಂಗ್ರಹ ಇತ್ಯಾದಿಗಳನ್ನು ಒದಗಿಸಲಾ ಗಿದೆ. ಇಲ್ಲಿಯವರೆಗೆ 5,537 ಗ್ರಾ.ಪಂ. ಗ್ರಂಥಾಲಯಗಳಲ್ಲಿ ಡಿಜಿಟಲ್‌ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ, ಈ ಗ್ರಂಥಾಲಯ ಗಳನ್ನು ಗ್ರಾಮೀಣ ಭಾಗಗಳಲ್ಲಿ ಪೋಷಿಸಿ ಮಕ್ಕಳಿಗೆ ಅರಿವಿನ ಸಂಗಾತಿ ಆಗಿಸಬೇಕೆಂದು ಸಚಿವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next