Advertisement

ಗ್ರಾಮೀಣಾಭಿವೃದ್ಧಿ –ವಿಜಯ ಬ್ಯಾಂಕ್‌ ಅಗ್ರಣಿ: ನಾಗೇಶ್ವರ ರಾವ್‌

06:15 AM Sep 19, 2017 | Team Udayavani |

ಮಂಗಳೂರು: ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ವಿಜಯ ಬ್ಯಾಂಕ್‌ ಅಗ್ರಗಣ್ಯ ಸ್ಥಾನದಲ್ಲಿದ್ದು, ಅದನ್ನು ಇನ್ನೂ ಉನ್ನತ ಮಟ್ಟಕ್ಕೆ ಏರಿಸಲಾಗುವುದು ಎಂದು ವಿಜಯ ಬ್ಯಾಂಕ್‌ ಕಾರ್ಯಕಾರಿ ನಿರ್ದೇಶಕ ವೈ. ನಾಗೇಶ್ವರ ರಾವ್‌ ತಿಳಿಸಿದರು.ವಿಜಯ ಬ್ಯಾಂಕ್‌ ವಲಯ ಕಚೇರಿ ಯಲ್ಲಿ ನಡೆದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡಿದ್ದರು.

Advertisement

ವಿಜಯ ಬ್ಯಾಂಕಿನ ಮಹಾ ಪ್ರಬಂಧಕ ಗೋವಿಂದ ಡೋಂಗ್ರೆ ಮಾತನಾಡಿ, ವಿವಿಧ ಯೋಜನೆಗಳಲ್ಲಿ ಸ್ವ-ಉದ್ಯೋಗ ಮತ್ತು ಶಿಕ್ಷಣಕ್ಕೆ ಸಾಲ ಪಡೆದು ಪ್ರಗತಿ ಸಾಧಿಸುವಂತೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ  ಪ್ರೇಮನಾಥ ಆಳ್ವ ಪ್ರತಿಷ್ಠಾನದ ಕಾರ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮಂಗಳೂರು ಆಕಾಶವಾಣಿ ಕಾರ್ಯ ಕ್ರಮ ನಿರ್ದೇಶಕ ಸದಾನಂದ ಹೊಳ್ಳ ಅವರು ಪ್ರತಿಷ್ಠಾನವು ಪ್ರಾಯೋಜಿಸಿದ ಬಾನುಲಿ ಪಾಠದ ಯಶಸ್ಸಿನ ಬಗ್ಗೆ ತಮ್ಮ ಸಂತೋಷ ವ್ಯಕ್ತ ಪಡಿಸಿದರು.

ಹೊಸಬೆಟ್ಟು ಮತ್ತು ಉಳ್ಳಾಲದ 50 ಆಯ್ದ ಮೀನುಗಾರ ಮಹಿಳೆಯರಿಗೆ ಶಾಖ ನಿರೋಧಕ ಪೆಟ್ಟಿಗೆಗಳನ್ನು ವಿತ
ರಿಸಲಾಯಿತು. ಪ್ರತಿಷ್ಠಾನ ಪ್ರಾಯೋ ಜಿಸಿದ ಬಾನುಲಿ ಪಾಠದ ಸದುಪ ಯೋಗ ಪಡೆದು ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಶೇಕಡಾವಾರು ತೇರ್ಗಡೆಯಲ್ಲಿ ಪ್ರಗತಿ ಸಾಧಿಸಿದ 7 ಪ್ರೌಢ ಶಾಲೆಗಳಿಗೆ ಕೊಡುಗೆಗಳನ್ನು ನೀಡಲಾಯಿತು. ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅಂಕ ಗಳಿಸಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಗಿಫ್ಟ್ ಕಾರ್ಡ್‌ ನೀಡಿ, ಗೌರವಿಸಲಾಯಿತು.

ವಿಜಯ ಬ್ಯಾಂಕಿನ ಮಂಗಳೂರು ವಲಯ ಕಚೇರಿಯ ಉಪ ಮಹಾ ಪ್ರಬಂಧಕ ಸುಧಾಕರ ನಾಯಕ್‌ ಸ್ವಾಗತಿಸಿ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ ವಂದಿಸಿದರು. ಪ್ರತಿಷ್ಠಾನದ ಮುಖ್ಯ ಕಾ.ನಿ. ಅಧಿಕಾರಿ ಉದಯ ಹೆಗಡೆ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next